ಎಸ್ಸೆಸ್ಸೆಲ್ಲಿ -3ನೇ ಹಂತದ ಪರೀಕ್ಷೆ ಮುಕ್ತಾಯ

Published on

ವಿಜಯವಾಣಿ ಸುದ್ದಿಜಾಲ ಚಿಂತಾಮಣಿ

ಜು.5ರಿಂದ ಪ್ರಾರಂಭವಾದ ಎಸ್ಸೆಸ್ಸೆಲ್ಸಿ ಪರೀಕ್ಷೆ-3 ಶುಕ್ರವಾರ ಮುಕ್ತಾಯಗೊಂಡಿತು. ಕನ್ನಡ ಪರೀಕ್ಷೆಗೆ 432 ನೋಂದಣಿಯಾಗಿದ್ದು 145 ಜನ ಗೈರಾಗಿದ್ದರು. ವಿಜ್ಞಾನ ವಿಷಯಕ್ಕೆ ಹೆಚ್ಚು ವಿದ್ಯಾರ್ಥಿಗಳು ಗೈರಾಗಿದ್ದರು. ಯಾವುದೇ ಅಕ್ರಮ ಅಥವಾ ಅಹಿತಕರ ಘಟನೆ ನಡೆಯದೆ ಎಲ್ಲ ಪರೀಕ್ಷೆಗಳು ನಗರದ ಮಹಾತ್ಮ ಗಾಂಧಿ ಸರ್ಕಾರಿ ಬಾಲಕರ ಪ್ರೌಢಶಾಲೆ ಮತ್ತು ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಎರಡು ಪರೀಕ್ಷೆ ಕೇಂದ್ರಗಳಲ್ಲಿ ಪರೀಕ್ಷೆ ಸುಸೂತ್ರವಾಗಿ ನಡೆಯಿತು.

ಒಟ್ಟಾರೆ ಆರು ವಿಷಯಗಳಲ್ಲಿ ಶೇ.36 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದರು. ಪರೀಕ್ಷೆ 1 ಮತ್ತು 2 ಕ್ಕೆ ಹೋಲಿಸಿದರೆ 3ನೇ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ನಿರಾಸಕ್ತಿ ಕಂಡುಬಂತು. ವಿದ್ಯಾರ್ಥಿಗಳ ಗೈರು ಹಾಜರಿ ನೋಡಿದರೆ ಮರು ಪರೀಕ್ಷೆಗಳ ಅವಶ್ಯಕತೆ ಇದೆಯಾ ಎಂಬ ಪ್ರಶ್ನೆ ಉದ್ಭವವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net