ಭರತನಾಟ್ಯದಲ್ಲಿ ಶ್ರೀನಿಧಿ ಸುವರ್ಣ ತೇರ್ಗಡೆ

Ull_Srinidhi
Published on

ಗುರುಪುರ: ಮೈಸೂರಿನ ಡಾ.ಗಂಗೂಬಾಯಿ ಹಾನಗಲ್​ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ನಡೆಸಿದ 2023&24ನೇ ಸಾಲಿನ ವಿಶೇಷ ಸಂಗೀತ ನೃತ್ಯ ಪರೀೆಯ ಭರತನಾಟ್ಯ ವಿದ್ವತ್​ ಅಂತಿಮ ವಿಭಾಗದ ಪರೀೆಯಲ್ಲಿ ಶ್ರೀನಿಧಿ ಎಸ್​. ಸುವರ್ಣ ಅವರು ಉನ್ನತ ಶ್ರೇಣಿಯೊಂದಿಗೆ ತೇರ್ಗಡೆಯಾಗಿದ್ದಾರೆ.

ವಾಮಂಜೂರಿನ ಅಮೃತೇಶ್ವರ ನಾಟ್ಯಾಲಯ ಸಂಸ್ಥೆಯ ನೃತ್ಯಗುರು ವಿದುಷಿ ಚಿತ್ರಾ ಅಜಿತ್​ ಕುಮಾರ್​ ಅವರ ಶಿಷ್ಯೆಯಾದ ಈಕೆ ಶ್ರೀನಿವಾಸ ಸುವರ್ಣ ಮಲ್ಲೂರು ಮತ್ತು ಕೃಪಾ ಶ್ರೀನಿವಾಸ ದಂಪತಿ ಪುತ್ರಿ. ಇವರು ವಾಮಂಜೂರು ಸೇಂಟ್​ ಜೋಸೆಫ್​ ಇಂಜಿನಿಯರಿಂಗ್​ ಕಾಲೇಜಿನಲ್ಲಿ ಎಂಬಿಎ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net