

ಕುಂದಾಪುರ: ಮೂಡಬಿದರೆ ಶ್ರೀ ವೀರ ಮಾರುತಿ ಸೇವಾ ಟ್ರಸ್ಟ್ ಹಾಗೂ ಮಂಗಳೂರು ಯೋಗಶ್ರೀ ಯೋಗ ಬಳಗ ಸಹಯೋಗದಲ್ಲಿ ನಡೆದ ರಾಜ್ಯಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ ಕುಂದಾಪುರದ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಶ್ರೀನಿಧಿ ಪ್ರಕಾಶ್ ಗೌಡ ಪ್ರಥಮ ಸ್ಥಾನ ಪಡೆದಿದ್ದಾರೆ. ಶಾಲಾಡಳಿತ ಮಂಡಳಿ, ಮುಖ್ಯಶಿಕ್ಷಕ, ಬೋಧಕ ಹಾಗೂ ಬೋಧಕೇತರ ವೃಂದ ವಿದ್ಯಾರ್ಥಿನಿಯನ್ನು ಅಭಿನಂದಿಸಿದೆ.