ಶ್ರೀಮನ್​ನಾರಾಯಣನ ನೆಲೆಬೀಡು ಶ್ರೀಪತಿಹಳ್ಳಿ

mgd
Published on

100ಕ್ಕೂ ಹೆಚ್ಚು ದೇಗುಲವಿರುವ ದೇವಗಣದ ಗ್ರಾಮ

ಮಾಗಡಿ: ದೇಶದ ಪ್ರತಿ ಗ್ರಾಮವೂ ತನ್ನದೆ ವೈಶಿಷ್ಟ$್ಯ ಹಾಗೂ ಇತಿಹಾಸ ಹೊಂದಿದ್ದು, ಆಧುನಿಕತೆ ಎಷ್ಟೇ ಮುಂದುವರಿದರೂ ಇಂದಿಗೂ ಸಂಸತಿ, ಸಂಪ್ರದಾಯ, ಆಚರಣೆಗಳಲ್ಲಿ ಜೀವಂತಿಕೆ ಉಳಿಸಿಕೊಂಡಿರುತ್ತವೆ. ಅಂತಹ ಗ್ರಾಮಗಳಲ್ಲಿ ಶ್ರೀಪತಿಹಳ್ಳಿಯೂ ಒಂದು.

ಹೌದು..! ಮಾಗಡಿಯಿಂದ ಕೇವಲ 9 ಕಿಮೀ ಅಂತರದಲ್ಲಿರುವ ಪುರಾತನ ಗ್ರಾಮ ಶ್ರೀಪತಿಹಳ್ಳಿ ದೇವಗಣದ ಬೀಡು ಎಂದೇ ಪ್ರಸಿದ್ಧಿ ಪಡೆದಿದೆ. ಗ್ರಾಮದಲ್ಲಿ ಲಕ್ಷಿ$್ಮ ವಾಸವಾಗಿರುವ ಸ್ಥಳದಲ್ಲಿ ಶ್ರೀಮನ್​ನಾರಾಯಣ ನೆಲೆಸಿರುವುದರಿಂದ ಶ್ರೀಪತಿಹಳ್ಳಿ ಎಂಬ ಹೆಸರು ಬಂದಿದೆ. 1742ರಲ್ಲಿ ಅರ್ಚಕ ಚಿಕ್ಕಣ್ಣಪ್ಪ ಎಂಬುವರು ಆಂಧ್ರದ ಕದರಿಯಿಂದ ಶ್ರೀ ಲಕ್ಷಿ$್ಮನರಸಿಂಹಸ್ವಾಮಿ ವಿಗ್ರಹತಂದು ಗ್ರಾಮದ ದೇವರ ಹಟ್ಟಿಯಲ್ಲಿ ಪ್ರತಿಷ್ಠಾಪಿಸಿದ್ದರು. ಅಂದಿನಿಂದ ಪಾರಂಪರಿಕವಾಗಿ ಪೂಜೆ ಸಲ್ಲಿಸಿಕೊಂಡು ಬರಲಾಗುತ್ತಿದೆ. ಗ್ರಾಮದಲ್ಲಿ ಪುರಾತನ ಶ್ರೀಲಕ್ಷಿ$್ಮನರಸಿಂಹಸ್ವಾಮಿ ದೇಗುವಲವಲ್ಲದೇ ಮಾರಮ್ಮ, ಕರಗದಮ್ಮ, ಆಂಜನೇಯ, ಪ್ಲೇಗ್​ ಮಾರಮ್ಮ, ಶನಿಮಹಾತ್ಮ, ಭಕ್ತ ಮುನೇಶ್ವರ, ಗಂಟೆ ಕಲ್ಲು ಮುನೇಶ್ವರ, ಕಾಟೇರಮ್ಮ, ಲಕ್ಷಿ$್ಮ ದೇಗುಲಗಳಿದ್ದು, ಕೊಡುಗೆ ಭೂಮಿಯ ಬಂಡೆಯಲ್ಲಿ ಉದ್ಭವ ಆಂಜನೇಯನಿಗೆ ದೇವಾಲಯ ನಿರ್ಮಾಣಕ್ಕೆ ಸದ್ಯ ಗ್ರಾಮಸ್ಥರು ಮುಂದಾಗಿದ್ದಾರೆ. ಗ್ರಾಮದ ಸುತ್ತಮುತ್ತ 100ಕ್ಕೂ ಹೆಚ್ಚು ದೇವಾಲಯಗಳಿರುವುದರಿಂದ ಗ್ರಾಮವನ್ನು ದೇವನಗರಿ, ದೇವಗಣದ ಬೀಡು ಎಂದೇ ಕರೆಯಲಾಗುತ್ತಿದೆ.

ಸೌಹಾರ್ದದ ಬದುಕುಶ್ರೀಪತಿಹಳ್ಳಿಯಲ್ಲಿ 300ಕ್ಕೂ ಹೆಚ್ಚು ಮನೆಗಳಿದ್ದು, 952ಕ್ಕೂ ಹೆಚ್ಚು ಮತದಾರರಿದ್ದಾರೆ. ವೀರಶೈವ, ಒಕ್ಕಲಿಗ, ಮರಾಠಿ, ಪರಿಶಿಷ್ಟ ಜಾತಿ, ಪಂಗಡ, ಭಜಂತ್ರಿ, ಯಾದವ ಸೇರಿ ಎಲ್ಲ ಸಮುದಾಯದವರಿದ್ದು, ಬಹುತೇಕರು ಕೃಷಿಯನ್ನೇ ಅವಲಂಬಿಸಿದ್ದಾರೆ. ತಹಸೀಲ್ದಾರ್​, ಬಿಇಒ, ವಕೀಲರು, ಶಿಕ್ಷಕ, ಪೊಲೀಸ್​, ಅಬಕಾರಿ, ಕಂದಾಯ ಇಲಾಖೆ ಸೇರಿ 100ಕ್ಕೂ ಹೆಚ್ಚು ಮಂದಿ ಸರ್ಕಾರಿ ನೌಕರರಿದ್ದಾರೆ. ವಿದ್ಯಾವಂತರೂ ಸಹ ಪಶುಸಂಗೋಪನೆ, ವಾಣಿಜ್ಯ ಬೆಳೆಗಳಾದ ಹೂವು, ಹಣ್ಣು, ತೆಂಗು, ಅಡಕೆ, ಮಾವು ಕೃಷಿಯಿಂದ ಪ್ರಗತಿ ಕಂಡಿದ್ದಾರೆ.ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಟಕ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಅಂಗನವಾಡಿ ಕೇಂದ್ರ, ಹಾಲಿನ ಡೇರಿಗಳು ಪ್ರಮುಖವಾಗಿವೆ. ಗ್ರಾಮದಲ್ಲಿ ಸಣ್ಣ, ಪುಟ್ಟ ವ್ಯಾಜ್ಯಗಳು ನಡೆದರೆ ಪೊಲೀಸ್​ ಠಾಣೆ ಮೆಟ್ಟಿಲು ಹತ್ತದೆ ಗ್ರಾಮದ ಹಿರಿಯರ ಸಮ್ಮುಖದಲ್ಲಿ ನ್ಯಾಯ ಪಂಚಾಯ್ತಿ ಮೂಲಕ ಇತ್ಯರ್ಥಪಡಿಸಿಕೊಳ್ಳುವ ಮೂಲಕ ಸೌಹಾರ್ದದ ಬದುಕು ಸಾಗಿಸುತ್ತಿದ್ದಾರೆ.ಪುರಾತನ ಬಾವಿಗಳೇ ಜಲಾಧಾರಗ್ರಾಮದಲ್ಲಿನ ಪುರಾತನ ಕಾಲದ 2 ಬಾವಿಗಳ ನೀರನ್ನೇ ಕುಡಿಯಲು ಜನ ಆಶ್ರಯಿಸಿದ್ದಾರೆ. ಇನ್ನು ಶ್ರೀಪತಿಹಳ್ಳಿ ಸಮೀಪದ ಕೆಂಪಸಾಗರದಲ್ಲಿ ಕೆಂಪೇಗೌಡರು ನಿರ್ಮಿಸಿದ ಕೆಂಪಸಾಗರ ಕೆರೆಯ ಬೃಹತ್​ ಏರಿಗಾಗಿ ಗ್ರಾಮದಿಂದ ಮಣ್ಣನ್ನು ಎತ್ತಿಕೊಂಡು ಹೋಗಿರುವ ಸ್ಥಳಗಳಿಂದು ಕಟ್ಟೆ, ತೊರೆಗಳಾಗಿವೆ. ಗ್ರಾಮದ ತಿರುವಿನ ಬಳಿ ಮುಮ್ಮಡಿ ಕೆಂಪೇಗೌಡರು ಕೆಂಪಸಾಗರ ಕೆರೆ ಹೂಳು ಎತ್ತಲು ಭೋವಿ ಜನಾಂಗಕ್ಕೆ ದಾನವಾಗಿ ಕೊಟ್ಟ ಜಮೀನಿನಲ್ಲಿ ಗಡಿ ಕಲ್ಲು ನೆಟ್ಟಿದ್ದರು. ಇದರಲ್ಲಿ ಕೋಣ, ಗುದ್ದಲಿಯ ಎರಡು ಗುರುತಿದ್ದು, ಇದು ಸೂರ್ಯ, ಚಂದ್ರರಿರುವವರೆಗೆ ಶಾಶ್ವತ ಎಂಬುದರ ದ್ಯೋತಕವಾಗಿದೆ.ಹುಣ್ಣಿಮೆ, ಅಮಾವಾಸ್ಯೆ ರಾತ್ರಿ ಹೊತ್ತಿ ಉರಿಯುವ ಕಲ್ಲು!ಪಾಂಡವರು ಗ್ರಾಮದ ಬಳಿ ಸಂಚಾರ ಮಾಡಿ ಕಲ್ಲಿನ ಮೇಲೆ ಕುಳಿತ ಕಲ್ಲನ್ನು ಪಾಂಡವರ ಕಲ್ಲು ಎಂದು ಕರೆಯಲಾಗುತ್ತಿದೆ. ಇಲ್ಲಿ ನಿಧಿಗಾಗಿ ಸಾಕಷ್ಟು ಪ್ರಯತ್ನಿಸಿದ್ದಾರೆ ಎಂಬ ಮಾತುಗಳಿದ್ದು, ಅಮಾವಾಸ್ಯೆ, ಪೌರ್ಣಮಿರಾತ್ರಿ ಕಲ್ಲಿನ ಬಳಿ ಬೆಂಕಿ ಹೊತ್ತಿಕೊಂಡು ಉರಿಯುತ್ತದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಈ ಸ್ಥಳಕ್ಕೆ ಆ ವೇಳೆ ಯಾರೂ ಹೋಗಬಾರದು ಎಂಬ ಪೂರ್ವಿಕರು ಮಾತಿನಂತೆ ಅಮಾವಾಸ್ಯೆ, ಹುಣ್ಣಿಮೆ ರಾತ್ರಿ ಯಾರೂ ಪಾಂಡವರ ಕಲ್ಲುಗಳ ಬಳಿ ಹೋಗುವುದಿಲ್ಲ. ಈ ಬಗ್ಗೆ ಪ್ರತ್ಯಕ್ಷವಾಗಿ ಕಂಡಿದ್ದೇವೆ ಎನ್ನುತ್ತಾರೆ ಗ್ರಾಮದ ಮಂಜುನಾಥ್​.ಶಾಂತಿ ಸ್ಥಾಪನೆಗೆ ನೆಲೆಗೊಂಡ ಕರಗದಮ್ಮಗ್ರಾಮದ ಬಳಿ 5ಕ್ಕೂ ಹೆಚ್ಚು ಬೃಹತ್​ ಗಾತ್ರದ ಗವಿಗಳಿವೆ. ಮುನೇಶ್ವರ ಗುಹೆಯ ಬಂಡೆ ಸಿಡಿಲು ಬಡಿದು ಎರಡು ಭಾಗವಾಗಿ ದೇವಾಲಯದ ರೀತಿ ಪರಿವರ್ತನೆಯಾಗಿದೆ. ಈ ಮುನೇಶ್ವರ ಗುಹೆಯಲ್ಲಿ ಗಳ ಚಾರಿ ಎಂಬುವರು ವಾಸವಿದ್ದರು. ಇವರು ಮಾಂಸಹಾರಿಯಾಗಿದ್ದರು. ಇನ್ನು ಗ್ರಾಮದಲ್ಲಿನ ಪ್ರಸಿದ್ಧ ಕರಗದಮ್ಮ ದೇವಿಯು ಚನ್ನಪಟ್ಟಣ ತಾಲೂಕಿನ ದಶವಾರ ಗ್ರಾಮದ ದೇವರಾಗಿದ್ದು, ಅಲ್ಲಿನ ಅರ್ಚಕರು ದೇವರನ್ನು ಎತ್ತಿಕೊಂಡು ಲೋಕಸಂಚಾರ ಮಾಡಿಕೊಂಡು ಶ್ರೀಪತಿಹಳ್ಳಿಗೆ ಬಂದಾಗ ಗ್ರಾಮದ ಜನ ಸಂಕಷ್ಟದಲ್ಲಿದ್ದಾರೆ, ಗ್ರಾಮದಲ್ಲಿ ಶಾಂತಿ ನೆಲೆಸಬೇಕು ಎಂಬ ಗ್ರಾಮದ ಪಟೇಲರ ಮನವಿಯಂತೆ 30 ಎಕರೆ ಜಮೀನು ಪಡೆದು, ಕರಗದಮ್ಮ ದೇವಿಯನ್ನು ಪ್ರತಿಷ್ಠಾಪಿಸಿದರು ಎಂಬ ಪ್ರತಿತಿ ಇದೆ.ಶ್ರೀಪತಿಹಳ್ಳಿಯು ಪುರಾತನ ಗ್ರಾಮ. ಹಲವು ದೇವಾಲಯಗಳಿಗೆ ರಸ್ತೆ ಅವಶ್ಯಕತೆ ಇದೆ. ಗ್ರಾಮದ ಬಳಿ ಪ್ರೌಢಶಾಲೆ ಇದ್ದು, ಹಾಸ್ಟ್ಟೆಲ್​ ವ್ಯವಸ್ಥೆ ಕಲ್ಪಿಸಿದರೆ ಮಕ್ಕಳಿಗೆ ಅನುಕೂಲವಾಗಲಿದೆ. ಮೂಲಸೌಕರ್ಯ ಒದಗಿಸಿದರೆ ಗ್ರಾಮ ಮುನ್ನೆಲೆಗೆ ಬರಲಿದೆ. ಈ ಬಗ್ಗೆ ಶಾಸಕರ ಗಮನಕ್ಕೂ ತರಲಾಗಿದೆ.> ಕೃಷ್ಣಪ್ಪ, ಕಲ್ಯ ಗ್ರಾಪಂ ಅಧ್ಯಕ್ಷಪುರಾತನ ಶ್ರೀ ಲಕ್ಷಿ$್ಮನರಸಿಂಹಸ್ವಾಮಿ ಮೂರ್ತಿಯನ್ನು ಅರ್ಚಕ ಹೊರಪ್ಪ ಪ್ರತಿಷ್ಠಾಪಿಸಿದರು. ನಂತರ ಅವರ ಕುಟುಂಬಸ್ಥರು ದೇವಾಲಯವನ್ನು ಜೀಣೋರ್ದ್ಧಾರಗೊಳಿಸಿಕೊಂಡು ಬಂದಿದ್ದಾರೆ. ಈ ದೇಗುಲಕ್ಕೆ ವಿದೇಶದಿಂದಲೂ ಭಕ್ತರು ಬಂದು ಪೂಜಿಸುತ್ತಾರೆ. ಸಾಕಷ್ಟು ಇತಿಹಾಸ ಹೊಂದಿರುವ ಗ್ರಾಮವನ್ನು ಪ್ರವಾಸಿತಾಣವಾಗಿ ಸರ್ಕಾರ ಘೋಷಿಸಬೇಕು.> ರಾಜಣ್ಣ ಅಧ್ಯಕ್ಷ, ನಮ್ಮ ಕರ್ನಾಟಕ ನವ ನಿರ್ಮಾಣ ವೇದಿಕೆಶ್ರೀಪತಿಹಳ್ಳಿಯು ಐತಿಹಾಸಿಕ ದೇವನಗರಿಯಾಗಿದೆ. ಇಲ್ಲಿನ ದೇವಾಲಯಗಳನ್ನು ಉಳಿಸುವ ಜತೆಗೆ ನಮ್ಮ ಸಂಸತಿಯನ್ನು ಬೆಳೆಸಿಕೊಂಡು ಬರಲಾಗುತ್ತಿದೆ. ಗ್ರಾಮವನ್ನು ಸರ್ಕಾರ ದತ್ತು ಪಡೆದು ಸೌಕರ್ಯ ಕಲ್ಪಿಸಿ, ಅಭಿವೃದ್ಧಿಗೊಳಿಸಬೇಕು.> ಮಂಜುನಾಥ್​ಗ್ರಾಮದ ಮುಖಂಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net