

ಆರ್ಡಿ: ತೆಂಕುಬೆಪ್ಡೆ ಶ್ರೀಮಲೆಸಾವಿರ ಗರಡಿಯಲ್ಲಿ ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಕೋಲ ಇತ್ತೀಚೆಗೆ ಸಂಪನ್ನಗೊಂಡಿತು.
ನಂದಿ, ಪಂಜುರ್ಲಿ, ಪಡಿಕಂತ್ತಾಯ ಜುಮರ ಜುಮಾದಿ, ದಂಟು, ಮಹಾಕಾಳಿ, ಪೊಟ್ಟ ದೈವಗಳ ಕೋಲ, ಸತ್ಯದೇವತೆ, ಕಲ್ಲುಕುಟ್ಟಿಗ, ವರ್ತೆ, ಬೈಕಾಡ್ತಿ, ಪಂಜುರ್ಲಿ, ದಾರಮ್ಮ ಬಲ್ಲಾಳ್ತಿ ದೈವ, ಧೂಮಾವತಿ, ಬಂಟ, ಮಲೆಸಾವಿರ, ಮರ್ಲುಭೂತಗಳು, ಮೈದಾಳ್ತಿ, ಚಿಕ್ಕು, ಮರ್ದಲ್ ಜುಮಾದಿ, ಕಾನ್ ಪಂಜುರ್ಲಿ, ದೈವಗಳ ಕೋಲ 3 ದಿನಗಳ ಕಾಲ ನಡೆಯಿತು. ಗರಡಿ ಅಧ್ಯಕ್ಷ, ಕಾರ್ಯದರ್ಶಿ, ಅಭಿವೃದ್ಧಿ ಸಮಿತಿ, ಅರ್ಚಕರು, ಊರ ಪರವೂರ ಭಕ್ತರು ಪಾಲ್ಗೊಂಡಿದ್ದರು.