

ಪಡುಬಿದ್ರಿ: ಓವರ್‌ಟೇಕ್ ಭರದಲ್ಲಿ ದ್ವಿಚಕ್ರ ಸವಾರ ಕಾರಿಗೆ ಡಿಕ್ಕಿಯಾಗಿ ಸಹಸವಾರ ನಂದಿಕೂರು ಬೆಳ್ಳಿಬೆಟ್ಟು ನಿವಾಸಿ ಗುರುವ ಮುಖಾರಿ (70) ಎಂಬುವರು ಮೃತಪಟ್ಟ ಘಟನೆ ಕಾರ್ಕಳ ರಾಜ್ಯ ಹೆದ್ದಾರಿ ಅಡ್ವೆ ಗರಡಿ ಬಳಿ ಮಂಗಳವಾರ ನಡೆದಿದೆ. ಸವಾರ ನಾಗರಾಜ್ ದ್ವಿಚಕ್ರವನ್ನು ವೇಗವಾಗಿ ಚಲಾಯಿಸಿ ಬಸ್ ಓವರ್ ಟೇಕ್ ಮಾಡಿ ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡರು. ಇಬ್ಬರನ್ನೂ ಪಡುಬಿದ್ರಿ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದು, ಗುರುವ ಅವರನ್ನು ಉಡುಪಿ ಜಿಲ್ಲಾಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ನಾಗರಾಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸವಾರ ನಾಗರಾಜ್ ವಿರುದ್ಧ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.