

ಬೆಂಗಳೂರು: ನಗರದ ಬಸವನಗುಡಿಯ ರಾಮಕೃಷ್ಣ ಮಠದಲ್ಲಿ ಮಾ.3 ರಿಂದ 9ರವರೆಗೆ ಶ್ರೀಮದ್ ಭಾಗವತ ಸಪ್ತಾಹ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರವಚನವನ್ನು ಮಠದ ಆವರಣದಲ್ಲಿರುವ ಸ್ವಾಮಿ ವಿವೇಕಾನಂದ ಶತಾಬ್ದ ಸಭಾಂಗಣದಲ್ಲಿ ಒಂದು ವಾರಕಾಲ ನಡೆಯಲಿರುವ ಕಾರ್ಯಕ್ರಮದಲ್ಲಿ ನಿತ್ಯ ಸಂಜೆ 5.15 ರಿಂದ 6.30ರವರೆಗೆ ಅದ್ವೈತ ಆಚಾರ್ಯ ಶ್ರೀ ರಮಣಚರಣ ತೀರ್ಥ ಸ್ವಾಮಿಗಳು (ಹಿಂದೆ ಶ್ರೀ ನೋಚೂರು ವೆಂಕಟರಮಣ) ಭಾಗವತದ 11ನೇ ಸ್ಕಂಧದ ಪ್ರವಚನ ನೀಡಲಿದ್ದಾರೆ.