ಕೋಟೇಶ್ವರದಲ್ಲಿ ಶ್ರೀಕೃಷ್ಣ ಲೀಲೋತ್ಸವ

gan (5)
Published on

ಕುಂದಾಪುರ: ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ನಡೆಯುತ್ತಿರುವ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಚಾತುರ್ಮಾಸ್ಯ ಸಂದರ್ಭದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ವಿಶೇಷ ಕಾರ್ಯಕ್ರಮ ಶ್ರೀಕೃಷ್ಣ ಲೀಲೋತ್ಸವ ಪಟ್ಟಾಭಿ ರಾಮಚಂದ್ರ ಕಲ್ಯಾಣ ಮಂದಿರದಲ್ಲಿ ಭಾನುವಾರ ನಡೆಯಿತು.

ಆರು ತಿಂಗಳಿಂದ 3 ವರ್ಷ, 3 ವರ್ಷದಿಂದ 8 ವರ್ಷ, 8 ವರ್ಷದಿಂದ 12 ವರ್ಷ, 12 ವರ್ಷದಿಂದ 16 ವರ್ಷದವರೆಗಿನ ಮಕ್ಕಳಿಗೆ ನಡೆದ ಮುದ್ದು ಕೃಷ್ಣ- ಮುದ್ದು ರಾಧಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಸ್ವಾಮೀಜಿ ಪ್ರಸಾದ ನೀಡಿ ಅನುಗ್ರಹಿಸಿದರು. ಸಮಾಜ ಬಾಂಧವರಿಂದ ‘ಕಂಸ ವಧೆ’ ಕಿರು ಪ್ರಹಸನ ಪ್ರದರ್ಶಶನಗೊಂಡಿತು. ವಿಟ್ಲಪಿಂಡಿ, ಮಲ್ಲ ಕಂಬ, ಮೊಸರು ಕುಡಿಕೆ ಹಾಗೂ ಮಾನವ ಪಿರಮಿಡ್ ರಚನೆ ಮೊದಲಾದ ಕಾರ್ಯಕ್ರಮಗಳು ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net