ರಮಾನಂದ ಭಟ್‌ಗೆ ಶ್ರೀಕೃಷ್ಣಗೀತಾನುಗ್ರಹ ಗೌರವ

New Project (12)
Published on

ಕೊಕ್ಕಡ: ಉಡುಪಿಯ ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣ ಮಠ ಹಾಗೂ ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾಮಂಡಲದ ಸಹಯೋಗದಲ್ಲಿ ನಡೆದ ಶ್ರೀಮಧ್ವನವಮ್ಯುತ್ಸವದಲ್ಲಿ, ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕ ರಮಾನಂದ ಭಟ್ ಅವರಿಗೆ ‘ಶ್ರೀಕೃಷ್ಣಗೀತಾನುಗ್ರಹ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಉಡುಪಿ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ರಮಾನಂದ ಭಟ್ ಅವರನ್ನು ಸನ್ಮಾನಿಸಿದರು.

800 ವರ್ಷಗಳ ಹಿಂದೆ ಮಧ್ವಾಚಾರ್ಯರು ತಮ್ಮ ಪರ್ಯಟನೆ ಸಂದರ್ಭ ಕೊಕ್ಕಡದ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಆಗಮಿಸಿ, ಶ್ರೀ ಕ್ಷೇತ್ರದಲ್ಲಿದ್ದು ಶ್ರೀಕೃಷ್ಣಾಮೃತಮಹಾರ್ಣವ ಎಂಬ ಗ್ರಂಥವೊಂದನ್ನು ಬರೆದಿದ್ದು ಅದನ್ನು ಇಲ್ಲಿನ ಎಡಪಡಿತ್ತಾಯ ಕುಟುಂಬಸ್ಥರಿಗೆ ನೀಡಿರುವುದು ಐತಿಹ್ಯ. ಈ ಪುಸ್ತಕವು ಏಕಾದಶಿ ವ್ರತದ ಬಗ್ಗೆ ಮಾಹಿತಿ ಒಳಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net