ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಶ್ರೀಕೃಷ್ಣನ ಚಿತ್ರ ಬಿಡಿಸುವ ಸ್ಪರ್ಧೆ

Shrikrishna
Published on

ಉಪ್ಪಿನಂಗಡಿ : ಇಲ್ಲಿನ ಶ್ರೀ ಮಾಧವ ಶಿಶು ಮಂದಿರದ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಶ್ರೀ ಕೃಷ್ಣನ ಚಿತ್ರ ಬಿಡಿಸುವ ಸ್ಪರ್ಧೆಯನ್ನು ವಿವಿಧ ವಿಭಾಗಗಳಲ್ಲಿ ಆಯೋಜಿಸಲಾಗಿದ್ದು, ಸ್ಪರ್ಧಾಳುಗಳು ತಾವೇ ಮನೆಯಲ್ಲಿ ಯಾ ಶಾಲೆಯಲ್ಲಿ ಚಿತ್ರವನ್ನು ರಚಿಸಿ ಕಳುಹಿಸಲು ಅವಕಾಶ ಕಲ್ಪಿಸಲಾಗಿದೆ.

ಅಂಗನವಾಡಿ ಯುಕೆಜಿ ಎಲ್ಕೆಜಿ, ಒಂದರಿಂದ ನಾಲ್ಕನೇ ತರಗತಿ, ಐದರಿಂದ ಏಳನೇ ತರಗತಿ ವಿಭಾಗದ ಮಕ್ಕಳು ತಮ್ಮ ಇಚ್ಛೆಯ ಶ್ರೀ ಕೃಷ್ಣ ಚಿತ್ರ ಬಿಡಿಸಬಹುದು. ಎಂಟರಿಂದ ಹತ್ತನೇ ತರಗತಿಯ ವಿಭಾಗದವರು ಗೋವರ್ಧನ ಶ್ರೀ ಕೃಷ್ಣ, ಪಿಯುಸಿಯಿಂದ ಪದವಿ ವರೆಗಿನ ವಿಭಾಗ ದವರು ಕಾಳಿಂಗ ಮರ್ದನ ಶ್ರೀ ಕೃಷ್ಣನ, ಸಾರ್ವಜನಿಕ ವಿಭಾಗ ಗೀತೋಪದೇಶದ ಚಿತ್ರ ರಚಿಸಬೇಕು.

ಸ್ಪರ್ಧೆಗೆ ಉಚಿತ ಪ್ರವೇಶವಕಾಶವಿದ್ದು, ಆಸಕ್ತರು ಶಾಲೆ ಮನೆಯಲ್ಲಿಯೇ ಚಿತ್ರ ರಚಿಸಿ ಅಂಚೆ ಮೂಲಕ ಯಾ ಖುದ್ದಾಗಿ ತಲುಪಿಸಬಹುದಾಗಿದೆ. ಎ4 ಅಳತೆಯ ಬಿಳಿ ಹಾಳೆಯ ಒಂದು ಪುಟದಲ್ಲಿ ಚಿತ್ರ ರಚಿಸಿ ಇನ್ನೊಂದು ಪುಟದಲ್ಲಿ ಹೆಸರು, ತರಗತಿ, ಶಾಲೆಯ ಹೆಸರು, ತಂದೆಯ ಹೆಸರಿನೊಂದಿಗೆ ಮನೆಯ ವಿಳಾಸ, ದೂರವಾಣಿ ಸಂಖ್ಯೆಯನ್ನು ನಮೂದಿಸಬೇಕು. ಆಗಸ್ಟ್ 20ರ ಒಳಗಾಗಿ ಚಿತ್ರಗಳನ್ನು ಅಧ್ಯಕ್ಶರು/ಕಾರ್ಯದರ್ಶಿ ಶ್ರೀ ಮಾಧವ ಶಿಶು ಮಂದಿರ, ವೇದಶಂಕರ ನಗರ ಉಪ್ಪಿನಂಗಡಿ. ದ.ಕ 574241 ಈ ವಿಳಾಸಕ್ಕೆ ಕಳುಹಿಸಬಹುದಾಗಿದೆ. ಸ್ಪರ್ಧೆಗೆ ಪ್ರಾದೇಶಿಕ ಇತಿಮಿತಿ ಇಲ್ಲ. ಆಸಕ್ತರೆಲ್ಲರಿಗೂ ಭಾಗವಹಿಸಲು ಮುಕ್ತ ಅವಕಾಶವಿದೆ.ಹೆಚ್ಚಿನ ಮಾಹಿತಿಗೆ 9741895998, 9448725998 ಸಂಪರ್ಕಿಸಬಹುದು ಪ್ರಕಟಣೆ ಎಂದು ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net