ಶ್ರೀದುರ್ಗಾಂಬೆ, ಲಕ್ಕಾಂಬೆದೇವಿಯ ಹೊಳೆದಂಡೆ ಯಾತ್ರೆ

05ALD05
ಹಟ್ಟಿ ಗ್ರಾಮದ ಶ್ರೀದುರ್ಗಾಂಬೆ, ಲಕ್ಕಾಂಬೆದೇವಿಯ ಹೊಳೆದಂಡೆ ಯಾತ್ರೆ ಅದ್ದೂರಿಯಿಂದ ನಡೆಯಿತು, ಭಕ್ತರು ಭಾಗವಹಿಸಿದ್ದರು.
Published on

ಅಳವಂಡಿ: ಸಮೀಪದ ಹಟ್ಟಿ ಗ್ರಾಮದ ಶ್ರೀದುರ್ಗಾಂಬೆ, ಲಕ್ಕಾಂಬೆದೇವಿಯ ಹೊಳೆದಂಡೆ ಯಾತ್ರೆ, ಗಂಗಾಪೂಜೆ ಹಾಗೂ ವಿಶೇಷ ಪೂಜೆ ಪುನಸ್ಕಾರಗಳು ಮಂಗಳವಾರ ಅದ್ದೂರಿಯಿಂದ ಜರುಗಿದವು.

ಶ್ರಾವಣ ಮಾಸದ ಮಂಗಳವಾರ ಅಂಗವಾಗಿ ಶ್ರೀದುರ್ಗಾಂಬೆ, ಲಕ್ಕಾಂಬೆದೇವಿಯರಿಗೆ ಬೆಳಗ್ಗೆಯಿಂದಲೇ ಭಕ್ತರು ವಿವಿಧ ಪೂಜೆ, ನೈವೇದ್ಯ ಸಲ್ಲಿಸಿ ನಂತರ ಉಡಿ ತುಂಬಿದರು.

ಅಡ್ಡಪಲ್ಲಕ್ಕಿಯಲ್ಲಿ ದೇವಿಯರ ಉತ್ಸವ ಮೂರ್ತಿ, ಡೊಳ್ಳಿನ ಮೇಳದೊಂದಿಗೆ ಸಮೀಪದ ತುಂಗಭದ್ರಾ ನದಿಗೆ ತೆರಳಿ ಗಂಗಾಪೂಜೆ ಸಲ್ಲಿಸಿದರು. ಮಳೆ, ಬೆಳೆ ಸಮೃದ್ದಿಯಾಗಲೆಂದು ಹಾಗೂ ಲೋಕ ಕಲ್ಯಾಣಾರ್ಥವಾಗಿ ಪೂಜೆ ಸಲ್ಲಿಸಿದರು. ಭಕ್ತರು ಗ್ರಾಮದಿಂದ ವಿವಿಧ ವಾಹನಗಳ ಮೂಲಕ ಬಂಧು ಬಳಗದೊಂದಿಗೆ ನದಿ ದಡದಲ್ಲಿ ಭೋಜನ ಸವಿದು ಗ್ರಾಮಕ್ಕೆ ಮರಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net