ಸರ್ಕಾರಿ ಆದೇಶ ಧಿಕ್ಕರಿಸಿ ನಡೆದ ಬನ್ನೇರುಘಟ್ಟ ಶ್ರೀಚಂಪಕಧಾಮಸ್ವಾಮಿ ಬ್ರಹ್ಮ ರಥೋತ್ಸವ

champakadhama mar 20
Published on

ಆನೇಕಲ್: ಕರೊನಾ ವೈರಸ್​ ಹರಡುವುದನ್ನು ತಡೆಯಲು ರಾಜ್ಯ ಸರ್ಕಾರ ಜಾತ್ರೆ ಹಾಗೂ ಧಾರ್ಮಿಕ ಉತ್ಸವ ನಿಷೇಧಿಸಿ ಆದೇಶ ಹೊರಡಿಸಿದ್ದರೂ ಆದೇಶ ಉಲ್ಲಂಘನೆ ಮಾಡಿ ಬನ್ನೇರುಘಟ್ಟದಲ್ಲಿ ಶ್ರೀ ಚಂಪಕಧಾಮ ಸ್ವಾಮಿ ಜಾತ್ರೆ ನಡೆಸಲಾಗಿದೆ.

ಮುಜರಾಯಿ ಇಲಾಖೆಗೆ ಸೇರುವ ಶ್ರೀ ಚಂಪಕಧಾಮಸ್ವಾಮಿಯ ಬ್ರಹ್ಮರಥೋತ್ಸವ ಅದ್ಧೂರಿಯಾಗಿ ನೆರವೇರಿದೆ. ಉತ್ಸವ ನಡೆಸದಂತೆ ಸರ್ಕಾರಿ ಆದೇಶ ಇದ್ದರೂ ತಹಸೀಲ್​ದಾರ್​ ದಿನೇಶ್​ ಜಾತ್ರೆ ನಡೆಸಲು ಅನುಮತಿ ನೀಡಿದ್ದಾರೆ.
ಜಾತ್ರೆಯಲ್ಲಿ ಸಾವಿರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು.

ಚಂಪಕಧಾಮಸ್ವಾಮಿ ದೇವಾಲಯ ಚೋಳರ ಕಾಲದಲ್ಲಿ ನಿರ್ಮಾಣವಾಗಿದೆ. ಅಲ್ಲದೆ ವಾಸ್ತುಶಿಲ್ಪಕ್ಕೆ ಹೆಸರಾಗಿದೆ. ಬನ್ನೇರುಘಟ್ಟ ಅರಣ್ಯದ ಅಂಚಿನಲ್ಲಿ ದೇವಾಲಯ ಇದೆ. ಪ್ರತಿ ವರ್ಷ ಮಾರ್ಚ್​ನಲ್ಲಿ ಇಲ್ಲಿ ರಥೋತ್ಸವ ನೆರವೇರುತ್ತದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net