ಶ್ರೀವಿಜಯಕವಚ ಪಾರಾಯಣ ಇಂದು

Published on

ಗಂಗಾವತಿ: ನಗರದ ಶ್ರೀರಾಘವೇಂದ್ರಸ್ವಾಮಿಗಳ ಮಠದಲ್ಲಿ ಶ್ರೀ ವಿಜಯದಾಸ ಭಕ್ತ ಮಂಡಳಿಯಿಂದ ಅ.29ರಿಂದ 31ರವರಿಗೆ ದಾಸವರೇಣ್ಯ ಶ್ರೀ ವಿಜಯದಾಸರ ಆರಾಧನೆ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. 23ನೇ ವರ್ಷದ ಶ್ರೀ ವಿಜಯ ಕವಚ ಸಮರ್ಪಣೆ ಮತ್ತು ಶ್ರೀ ವಿಜಯದಾಸರ 270ನೇ ಆರಾಧನೆ ಮಹೋತ್ಸವ ಜರುಗಲಿದೆ.

ಅ.30ರಂದು ಪೂರ್ವಾರಾಧನೆ ನಿಮಿತ್ತ ಬೆಳಗ್ಗೆ ಶ್ರೀವಿಜಯಕವಚ ಪಾರಾಯಣ, ಶ್ರೀ ವಿಜಯಧ್ವಜ ಮಹಿಳಾ ಭಜನಾ ಮಂಡಳಿಯಿಂದ ಭಜನೆ, ಶ್ರೀ ವಿಜಯಾಮೃತ, ಶ್ರೀ ವಿಜಯದಾಸರ ಸುಳಾದಿಗಳ ಅವಲೋಕನ ಕುರಿತು ವಿಜಯಧ್ವಜ ವಿದ್ಯಾಪೀಠದ ಅಧ್ಯಾಪಕ ವಾಗೀಶಾಚಾರ್ ಗೋರೆಬಾಳ್, ಶ್ರೀ ವಿಜಯರಾಯ ಸ್ಮರಣೆ ಕುರಿತು ಮಂತ್ರಾಲಯದ ಶ್ರೀ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ಅಧ್ಯಾಪಕ ಪವನಾಚಾರ್ಯ ಕುರ್ಡಿ, ಹರಿದಾಸರ ಲೋಕನೀತಿ ಕುರಿತು ಸುಸ್ವರಂ ನಾಗರಾಜಾಚಾರ್ಯ ಅದೋನಿ ಅವರು ಉಪನ್ಯಾಸ ನೀಡಲಿದ್ದಾರೆ. ನಂತರ ಶ್ರೀ ವಿಜಯವಿಠ್ಠಲ ಮಹಿಳಾ ಭಜನಾ ಮಂಡಳಿಯಿಂದ ಭಜನೆ, ಅಷ್ಟಾವಧಾನ ಸೇವೆ ಮತ್ತು ಮಹಾಮಂಗಳಾರತಿ ನೆರವೇರಲಿವೆ.

ಅ.31ರಂದು ಮಧ್ಯಾರಾಧನೆ ನಿಮಿತ್ತ ಬೆಳಗ್ಗೆ ಸುಪ್ರಭಾತ, ಶ್ರೀ ವಿಜಯಕವಚ ಪಾರಾಯಣ ಸಮರ್ಪಣೆ, ಪಲ್ಲಕ್ಕಿ ಸೇವೆ, ಭಾಗವತದಲ್ಲಿ ಶ್ರೀ ವಿಜಯದಾಸರು ಮತ್ತು ನಕ್ಷತ್ರ ಮಾಲಿಕಾ ಕುರಿತು ಸುಸ್ವರಂ ನಾಗರಾಜಾಚಾರ್ಯ ಆದೋನಿ ಅವರಿಂದ ಉಪನ್ಯಾಸ, ಮಹಾಮಂಗಳಾರತಿ, ಅಲಂಕಾರ, ತೀರ್ಥ ಪ್ರಸಾದ ಜರುಗಲಿದೆ. ಸಂಜೆ ಸಮಾರೋಪ ಕಾರ್ಯಕ್ರಮದಲ್ಲಿ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳ ಮಠ ಡಿವಿಜನಲ್ ಮ್ಯಾನೇಜರ್‌ಗೆ ಶ್ರೀ ವಿಜಯಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ವಿಜಯಭಕ್ತ ದಾಸ ಭಕ್ತ ಮಂಡಳಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net