ಶ್ರೀ ಶನೈಶ್ಚರ ಪೂಜೆಯ ಆಮಂತ್ರಣ ಬಿಡುಗಡೆ

New Project (38)
Published on

ಬಂಟ್ವಾಳ: ಗ್ರಾಮ ವಿಕಾಸ ಪ್ರತಿಷ್ಠಾನ ಹಾಗೂ ನೆತ್ತರಕೆರೆ ಶ್ರೀ ಶನೈಶ್ಚರ ಪೂಜಾ ಸೇವಾ ಸಮಿತಿ ಆಶ್ರಯದಲ್ಲಿ ನ.23ರಿಂದ 30ರವರೆಗೆ ನಡೆಯುವ ಸಾಮೂಹಿಕ ಎಳ್ಳುಗಂಟು ದೀಪೋತ್ಸವ ಹಾಗೂ ಶ್ರೀ ಶನೈಶ್ಚರ ಪೂಜೆಯ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಭಾನುವಾರ ನೆತ್ತರಕೆರೆಯ ಭಜನಾ ಮಂದಿರದಲ್ಲಿ ನಡೆಯಿತು.

ಗ್ರಾಮ ವಿಕಾಸ ಪ್ರತಿಷ್ಠಾನದ ಸಂಯೋಜಕ ಸಂತೋಷ್ ಕುಮಾರ್ ನೆತ್ತರಕೆರೆ, ಸಾಮೂಹಿಕ ಶ್ರೀ ಶನೈಶ್ಚರ ಪೂಜಾ ಸೇವಾ ಸಮಿತಿಯ ಅಧ್ಯಕ್ಷ ರಘುನಾಥ ಸಪಲ್ಯ ಹೊಳ್ಳರಬೈಲು, ಕಾರ್ಯದರ್ಶಿ ವಿದ್ಯಾರಾಜ್ ಕಾಪಿಕಾಡ್, ಕೋಶಾಧಿಕಾರಿ ರವಿ ಯು.ಜಿ, ನವೋದಯ ಮಿತ್ರ ಕಲಾ ವೃಂದದ ಗೌರವಾಧ್ಯಕ್ಷ ಪಿ.ಸುಬ್ರಮಣ್ಯ ರಾವ್, ಸಂಚಾಲಕ ದಾಮೋದರ ನೆತ್ತರಕೆರೆ, ನೇತ್ರಾವತಿ ಮಾತೃ ಮಂಡಳಿಯ ಸಂಚಾಲಕಿ ಲಲಿತ ಸುಂದರ್, ಅಧ್ಯಕ್ಷೆ ಮಾಲತಿ ಚಂದ್ರಹಾಸ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net