ಸಾಂಸ್ಕೃತಿಕ ವೈವಿಧ್ಯತೆ ಸಂರಕ್ಷಣೆ ಅನಿವಾರ್ಯ : ಪ್ರೊ.ಎಂ.ಎನ್.ವೆಂಕಟೇಶ್ ಹೇಳಿಕೆ

New Project (35)
Published on

ಕಾಸರಗೋಡು: ಸಹ ಜೀವನ, ಜೀವನದಲ್ಲಿ ಸಹನೆ ಅಳವಡಿಸಿಕೊಳ್ಳಬೇಕಾದರೆ ಸಾಂಸ್ಕೃತಿಕ ವೈವಿಧ್ಯತೆ ಸಂರಕ್ಷಣೆ ಅನಿವಾರ್ಯ ಎಂದು ಕುಪ್ಪಂ ಡ್ರಾವಿಡ ವಿಶ್ವವಿದ್ಯಾಲಯದ ಸೋಶಿಯಲ್ ಸಯನ್ಸ್ ಡೀನ್ ಪ್ರೊ.ಎಂ.ಎನ್.ವೆಂಕಟೇಶ್ ಹೇಳಿದರು.

ಕೇರಳ ಕೇಂದ್ರ ವಿಶ್ವವಿದ್ಯಾಲಯ, ಪೋಕ್‌ಲ್ಯಾಂಡ್ ತೃಕ್ಕರಿಪುರ, ಕಣ್ಣೂರು ವಿಶ್ವವಿದ್ಯಾಲಯ ಬಹುಭಾಷಾ ಅಧ್ಯಯನ ಕೇಂದ್ರ, ನಾಟ್ಯ ರತ್ನ ಕಣ್ಣೂರು ಪಾಟಾಳಿ ಸ್ಮಾರಕ ಕಥಕ್ಕಳಿ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ನಡೆದ ಸಾಂಸ್ಕೃತಿಕ ವೈವಿಧ್ಯತೆ ಸಂರಕ್ಷಣೆ ಎಂಬ ವಿಷಯದ ಅಂತಾರಾಷ್ಟ್ರೀಯ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.

ಡಾ.ವಿ.ಜಯರಾಜನ್ ಅಧ್ಯಕ್ಷತೆ ವಹಿಸಿದ್ದರು. ಡಾ.ಎ.ಎಂ.ಶ್ರೀಧರನ್ ಅವಲೋಕನಗೈದರು. ಪ್ರೊ.ಕೆ.ಕಮಲಾಕ್ಷ ಪ್ರಮಾಣಪತ್ರ ವಿತರಿಸಿದರು. ಡಾ.ಆರ್.ಚಂದ್ರಬೋಸ್ ಕೆ, ಸುರೇಶ್ ಮಾತನಾಡಿದರು.

ಕೋಟಯ್ಕಲ್ ಉಣ್ಣಿಕೃಷ್ಣನ್ ನೇತೃತ್ವದ ತಂಡದಿಂದ ಕಥಕ್ಕಳಿ-ಯಕ್ಷಗಾನ ಬಗ್ಗೆ ವಿಚಾರ ಮಂಥನ ನಡೆಯಿತು. ಪ್ರೊ.ಕೃಷ್ಣಯ್ಯ, ಡಾ.ವಿ.ಪಿ.ರಾಘವನ್, ಪ್ರೊ.ಸಿನಿ ಎಂ., ಸಂದಾಲ್ ಜುಮೆಲ್, ಡಾ.ಕೆ.ಎಂ.ಅರವಿಂದಾಕ್ಷನ್ ಮಾತನಾಡಿದರು. ಡಾ.ದೇವಿ ಕಾರ್ಯಕ್ರಮ ಸಂಯೋಜಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net