

ಬೆಂಗಳೂರು: ಬೆಂಗಳೂರಿನ ವಿಶ್ವಾಸಾರ್ಹ ಆಭರಣ ಮಳಿಗೆಗಳಲ್ಲಿ ಒಂದೆನಿಸಿರುವ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ನ ಎಲ್ಲ ಶಾಖೆಗಳು ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ತಮ್ಮ ಗ್ರಾಹಕರಿಗೆ ಅಕರ್ಷಕ ಕೊಡುಗೆಗಳನ್ನು ನೀಡುತ್ತಿದೆ.
ಜೈಪುರದ ರಾಜಮನೆತನದ ಇತಿಹಾಸ ಸಾರುವ ಪಾರಂಪರಿಕ ಒಡವೆಗಳು, ಭಾರತೀಯ ಸಂಸ್ಕೃತಿ ಮತ್ತು ಶತಮಾನಗಳ ಪುರಾತನ ವಿನ್ಯಾಸಗಳನ್ನು ಪ್ರತಿಧ್ವನಿಸುವ ದೈವಿಕ ಆಭರಣಗಳು, ಭಕ್ತಿ ಬಂಬಿಸುವ ಲೈಟ್ ವೈಟ್ ಟೆಂಪಲ್ ಜ್ಯುವೆಲ್ಲರಿ, ಹೊಳೆಯುವ ವಜ್ರದ ಸೆಟ್‌ಗಳು, ಬೆಳ್ಳಿ ಆಭರಣಗಳು ಮತ್ತು ಚಿನ್ನದ ಆ್ಯಂಟಿಕ್ ಆಭರಣಗಳ ಸಂಗ್ರಹಗಳೊಂದಿಗೆ ಕೊಡುಗೆಗಳನ್ನು ಪ್ರಕಟಿಸಿದೆ.
ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಆಭರಣ ಕೊಳ್ಳುವ ಪ್ರತಿ ಗ್ರಾಹಕರಿಗೆ ವಜ್ರದ ಆಭರಣಗಳಿಗೆ ಶೇ. 10 ರಿಯಾಯಿತಿ. ಚಿನ್ನದ ಆಭರಣಗಳ ಮೇಕಿಂಗ್ ಜಾರ್ಜ್‌ನಲ್ಲಿ ಶೇ. 10 ರಿಯಾಯಿತಿ. ಬೆಳ್ಳಿ ಆಭರಣಗಳ ಖರೀದಿಯಲ್ಲಿ ಶೇ. 10 ರಿಯಾಯಿತಿ ಹಾಗೂ ಪ್ರತಿ ಕೆ.ಜಿ. ಬೆಳ್ಳಿ ವಸ್ತುಗಳ ಖರೀದಿಗೆ 2 ಸಾವಿರ ರೂ. ರಿಯಾಯಿತಿ ಘೋಷಿಸಿದೆ.
ಈ ಕುರಿತು ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ನ ಮಾಲೀಕ ಡಾ. ಟಿ.ಎ. ಶರವಣ ಮಾತನಾಡಿ, ನಮ್ಮೆಲ್ಲಾ ಗ್ರಾಹಕರು ಕುಟುಂಬದವರಿದ್ದಂತೆ. ಅವರ ವಿಶ್ವಾಸವನ್ನು ಉಳಿಸಿಕೊಂಡು ಉತ್ತಮ ಗ್ರಾಹಕ ಸೇವೆ ನೀಡುತ್ತಾ ಬಂದಿದ್ದೇವೆ. ಮಧ್ಯಮ ವರ್ಗದವರಿಗೆ ಒಂದೇ ಬಾರಿಗೆ ಚಿನ್ನ ಕೊಳ್ಳುವುದು ಕಷ್ಟಕರ. ಅಂತಹ ಕುಟುಂಬಗಳಿಗಾಗಿ ಚಿನ್ನ ಖರೀದಿ ಮತ್ತು ಅದರ ಮೇಲಿನ ಹೂಡಿಕೆಗೆ ಅನುಕೂಲವಾಗುವಂತೆ ಶ್ರೀ ಸಾಯಿ ಸಮೃದ್ಧಿ ಉಳಿತಾಯ ಯೋಜನೆ ಮತ್ತು ಶ್ರೀ ಸಾಯಿ ನಿತ್ಯನಿಧಿ ಉಳಿತಾಯ ಯೋಜನೆಯನ್ನು ಹೊಂದಿದೆ. ಈ ಎಲ್ಲ್ಲ ಕೊಡುಗೆಗಳು ಬಸವನಗುಡಿ, ಎಚ್‌ಎಸ್‌ಆರ್. ಲೇಔಟ್, ಯಲಹಂಕ, ಕೆ.ಆರ್.ಪುರ ಮತ್ತು ನಾಗರಬಾವಿ ಶಾಖೆಗಳಲ್ಲಿ ಲಭ್ಯ. ಗ್ರಾಹಕರು ತಮ್ಮ ಹತ್ತಿರದ ಶಾಖೆಗೆ ತೆರಳಿ ಈ ರಿಯಾಯಿತಿಯ ಸದುಪಯೋಗ ಪಡೆದುಕೊಳ್ಳಬೇಕೆಂದು ವಿನಂತಿಸಿದ್ದಾರೆ.