ಧಾರ್ಮಿಕತೆಗೆ ಒತ್ತು ನೀಡಿದ್ದ ಶ್ರೀರೇಣುಕಾಚಾರ್ಯರು

12 HANUR 7 meeting ]
ಹನೂರಿನಲ್ಲಿ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿಯನ್ನು ಆಚರಿಸಲಾಯಿತು. ಗುರುಲಿಂಗಯ್ಯ, ನಾಗೇಂದ್ರ, ಮಹಾದೇವ, ಸೋಮಶೇಖರ್, ಮುರುಡೇಶ್ವರಸ್ವಾಮಿ ಇತರರು ಇದ್ದರು.
Published on

ಹನೂರು: ಜಗದ್ಗುರು ಶ್ರೀ ರೇಣುಕಾಚಾರ್ಯರು ಧಾರ್ಮಿಕತೆಗೆ ಹೆಚ್ಚಿನ ಒತ್ತು ನೀಡುವುದರ ಜತೆಗೆ ದಾಸೋಹ ಪರಂಪರೆ ಹಾಗೂ ಕಾಯಕ ನಿಷ್ಠೆಗೆ ಮಹತ್ವ ನೀಡಿದ್ದರು ಎಂದು ಬಿಇಒ ಗುರುಲಿಂಗಯ್ಯ ತಿಳಿಸಿದರು.

ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿಗೃಹದ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಶ್ರೀ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ರೇಣುಕಾಚಾರ್ಯರು ಶಕ್ತಿ ವಿಶಿಷ್ಟದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿ ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ದಿವ್ಯವಾಣಿಯ ಮೂಲಕ ಜಗತ್ತಿಗೆ ಸಂದೇಶವನ್ನು ಸಾರಿದ್ದು, ಉತ್ತಮ ಸಮಾಜಕ್ಕೆ ಸೋಪಾನವಾಗಿದೆ ಎಂದು ತಿಳಿಸಿದರು.

ಶಿರಸ್ತೇದಾರ್ ನಾಗೇಂದ್ರ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಮಹಾದೇವ, ಆರ್‌ಐ ಶೇಷಣ್ಣ, ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ಸೋಮಶೇಖರ್, ನಿರ್ದೇಶಕ ಮುರುಡೇಶ್ವರಸ್ವಾಮಿ, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ನಾಗೇಂದ್ರ, ಮುಖಂಡರಾದ ಉಮೇಶ್, ಶಿವಕುಮಾರ್, ಜಗದೀಶ್, ವಿನೋದ್‌ಕುಮಾರ್, ರಾಜಣ್ಣ, ಸದಾಶಿವಮೂರ್ತಿ, ನಾಗೇಂದ್ರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net