

Sri Ranga Kuteera : ರಿಯಲ್‌ಎಸ್ಟೇಟ್ ಹೂಡಿಕೆದಾರರ ಮೆಚ್ಚಿನ ಸ್ಥಳಗಳಲ್ಲಿ ಚಿಕ್ಕಬಳ್ಳಾಪುರ ಪ್ರಮುಖವಾಗಿದೆ. ಅಭಿವೃದ್ಧಿ ದೃಷ್ಟಿಯಿಂದ ನೋಡಿದರೂ ಈ ಭಾಗದಲ್ಲಿ ಹಾಕಿರುವ ಬಂಡವಾಳ ಭವಿಷ್ಯದಲ್ಲಿ ದುಪ್ಪಟ್ಟಾಗುವುದರಲ್ಲಿ ಸಂಶಯವಿಲ್ಲ. ಇದಕ್ಕೆ ಪೂರಕವಾಗಿ ಚರಿಗನ್ ಗ್ರೂಪ್, ಚಿಕ್ಕಬಳ್ಳಾಪುರದ ಎಂ.ಜಿ. ರಸ್ತೆ ಬಳಿ 40 ಎಕರೆಯಲ್ಲಿ ಅಭಿವೃದ್ಧಿಪಡಿಸಿರುವ 'ಶ್ರೀರಂಗ ಕುಟೀರ' ಪ್ರಾಜೆಕ್ಟ್ ಗ್ರಾಹಕರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ.
30x40, 30x50, 40x60 ವಿಸ್ತೀರ್ಣದ ನಿವೇಶನಗಳು ಲಭ್ಯವಿದ್ದು, ಪ್ರತಿ ಚದರಡಿಗೆ 3,600 ರೂ. ಇದೆ. 30x40 ನಿವೇಶನವು 44 ಲಕ್ಷ ರೂ.ಗಳಿಗೆ ದೊರೆಯಲಿದೆ. ಚಿಕ್ಕಬಳ್ಳಾಪುರ ನಗರ ಪ್ರಾಧಿಕಾರ, ರೇರಾ ಅನುಮೋದನೆ ಹೊಂದಿರುವ ಲೇಔಟ್‌ನಲ್ಲಿ ವಿದ್ಯುತ್, ಬೀದಿದೀಪ, ರಸ್ತೆ, ನೀರಿನ ಸಂಪರ್ಕ, ಬಾಕ್ಸ್ ಡೈನೇಜ್, ಸಾಲುಮರಗಳು, ರಸ್ತೆ ಹಾಗೂ 24x7 ಭದ್ರತೆ ಸೇರಿ ಇತರ ಎಲ್ಲ ನಾಗರಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಪ್ರತಿ ರಸ್ತೆಯಲ್ಲೂ ಮಳೆನೀರು ಕೊಯ್ದು ವ್ಯವಸ್ಥೆ ಮಾಡಲಾಗಿದೆ. ಇದು ಭವಿಷ್ಯದ ಜಲದಾಹಕ್ಕೆ ಉತ್ತಮ ಯೋಜನೆಯಾಗಿದೆ.
ಅಂಡರ್‌ಗ್ರೆಂಡ್ ಕೇಬಲ್ ಅಳವಡಿಕೆ, ಮಳೆ ನೀರು ಸರಾಗವಾಗಿ ಹರಿಯುವಂತೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಗುಣಮಟ್ಟದ ರಸ್ತೆಗಳ ನಿರ್ಮಾಣದ ಜತೆಗೆ ಪ್ರತಿ ರಸ್ತೆಯಲ್ಲಿ ಗಿಡ ನೆಟ್ಟಿರುವುದು ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಉತ್ತಮ ಹೆಜ್ಜೆ. ಗೇಟೆಡ್ ಕಮ್ಯೂನಿಟಿ ಸೌಲಭ್ಯ ಹೊಂದಿರುವ ಲೇಔಟ್‌ನಲ್ಲಿ ಹಚ್ಚ ಹಸಿರಿನ ಪ್ರಕೃತಿ ಸೌಂದರ್ಯ ಮೂಲಕ ಆಕರ್ಷಣೆಯ ಕೇಂದ್ರವಾಗಿ ರಂಜಿಸುತ್ತಿದೆ.
ವಾಕಿಂಗ್ ಟ್ರ್ಯಾಕ್, ಜಾಗಿಂಗ್ ಟ್ರ್ಯಾಕ್, ಕ್ಲಬ್‌ಹೌಸ್, ಉದ್ಯಾನವನಗಳನ್ನು ನಿರ್ಮಿಸಲಾಗಿದೆ. ರಾಷ್ಟ್ರೀಯ ಮತ್ತು ಖಾಸಗಿ ಬ್ಯಾಂಕ್‌ಗಳಿಂದ ನಿವೇಶನ ಖರೀದಿಗೆ ಸುಲಭವಾಗಿ ಸಾಲ ದೊರೆಯಲಿದ್ದು, ಗ್ರಾಹಕರು ತಕ್ಷಣ ನಿವೇಶನ ಖರೀದಿಸಿ, ನೋಂದಣಿ ಮಾಡಿಕೊಂಡು ಕೂಡಲೇ ಮನೆ ಕಟ್ಟಬಹುದು. ಲೇಔಟ್ ಸುತ್ತಮುತ್ತ ಪ್ರತಿಷ್ಠಿತ ಶಾಲಾ- ಕಾಲೇಜು, ಆಸ್ಪತ್ರೆಗಳು, ದೇವಸ್ಥಾನಗಳಿವೆ. ನಿವೇಶನದ ಸುತ್ತಲೂ ಇರುವ ಬೆಟ್ಟಗುಡ್ಡಗಳು ಉತ್ತಮ ದೃಶ್ಯವನ್ನು ಒದಗಿಸಿದೆ. ಗೌರಿಬಿದನೂರು ರಾಜ್ಯ ಹೆದ್ದಾರಿ ಸಮೀಪದಲ್ಲಿರುವುದರಿಂದ ಉತ್ತಮ ಕನೆಕ್ಟಿವಿಟಿ ಹೊಂದಿದೆ. ಭವಿಷ್ಯದ ದೃಷ್ಟಿಯಲ್ಲಿ ಹೂಡಿಕೆ ಮಾಡುವವರಿಗೆ ಇದು ಸುವರ್ಣಾವಕಾಶವಾಗಿದೆ.
ವಾಣಿಜ್ಯೋದ್ದೇಶದೊಂದಿಗೆ ವ್ಯವಹಾರ ನಡೆಸುತ್ತಿರುವ ಚರಿಗನ್ ಗ್ರೂಪ್, ಸಮಾಜಸೇವೆಯಲ್ಲೂ ಮುಂಚೂಣಿಯಲ್ಲಿದೆ. ಕಂಪನಿ ಗಳಿಸಿರುವ ಒಟ್ಟು ಆದಾಯದಲ್ಲಿ ಕೆಲ ಭಾಗವನ್ನು ಸಂಸ್ಥಾಪಕ ಸಂದೀಪ್ ಡಿ. ರೆಡ್ಡಿ ಸಮಾಜಸೇವೆಗೆ ವಿನಿಯೋಗಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳ ಅಭಿವೃದ್ಧಿ, ಸರ್ಕಾರಿ ಆಸ್ಪತ್ರೆಗಳಿಗೆ ಉಚಿತವಾಗಿ ಔಷಧ ಸೇರಿ ಇತರೆ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಅವರ ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗಿದೆ.
ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ 16 ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ನಮ್ಮ ಕಂಪನಿ, ಸಾವಿರಾರು ಗ್ರಾಹಕರಿಗೆ ನಿವೇಶನಗಳನ್ನು ಮಾರಾಟ ಮಾಡಿದೆ. ಗುಣಮಟ್ಟ ಲೇಔಟ್ ನಿರ್ಮಿಸಲಾಗಿದ್ದು, 'ಶ್ರೀರಂಗ ಕುಟೀರ' ಲೇಔಟ್ ನಿವೇಶನಗಳು ನೋಂದಣಿ ಹಾಗೂ ಕಟ್ಟಡ ನಿರ್ಮಾಣಕ್ಕೆ ಸಿದ್ಧವಾಗಿವೆ.
| ಸಂದೀಪ್ ಡಿ. ರೆಡ್ಡಿ ಚರಿಗನ್ ಗ್ರೂಪ್ ಸಂಸ್ಥಾಪಕ