High Living Estates : ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರಿದ ರಾಮನಗರ- ಮಾಗಡಿ ಮುಖ್ಯರಸ್ತೆಯಲ್ಲಿ ಹೈ ಲಿವಿಂಗ್ ಎಸ್ಟೇಟ್ಸ್ ವತಿಯಿಂದ ಸುಮಾರು 10 ಎಕರೆ ವ್ಯಾಪ್ತಿಯಲ್ಲಿ ‘ಮೌಂಟೇನ್ಸ್ ಆಂಡ್ ಮ್ಯಾಂಗೋಸ್’ ಫಾಮ್ರ್ ಲ್ಯಾಂಡ್ ಯೋಜನೆ ಪ್ರಗತಿಯಲ್ಲಿದೆ. ಇದರಲ್ಲಿ 7 ಎಕರೆ ಫಾಮ್ರ್ ಲ್ಯಾಂಡ್ ಆಗಿ ಅಭಿವೃದ್ಧಿಪಡಿಸಲಾಗಿದ್ದು, ಉಳಿದ ಮೂರು ಎಕರೆ ಪ್ರದೇಶದಲ್ಲಿ ರೆಸಾರ್ಟ್ ನಿರ್ವಿುಸಲಾಗುತ್ತಿದೆ.
ನೈಸರ್ಗಿಕ ಸೌಂದರ್ಯದ ನಡುವೆ ಆಧುನಿಕ ಸೌಕರ್ಯಗಳೊಂದಿಗೆ ನಿರ್ವಿುಸಲಾಗಿರುವ ಫಾಮ್ರ್ ಲ್ಯಾಂಡ್ನಲ್ಲಿ ಮನೆಗಳನ್ನು ಹಾಗೂ ವಿಲ್ಲಾಗಳನ್ನು ಒದಗಿಸಲಾಗುವುದು. ಪ್ರತಿ ನಿವೇಶನ 5.5 ಗುಂಟೆಯಿಂದ 10 ಗುಂಟೆವರೆಗೂ ಲಭ್ಯವಿದೆ. ಮನೆಯ ಜತೆಗೆ ಶ್ರೀಗಂಧ, ಮಾವು, ತೆಂಗು ಕೃಷಿ ಮಾಡಲಾಗುವುದು. ವಿವಿಧ ಮೂಲಸೌಕರ್ಯಗಳ ಜತೆಗೆ ಇದಕ್ಕೆ ಹೊಂದಿಕೊಂಡಂತೆ ರೆಸಾರ್ಟ್ ನಿರ್ಮಾಣ ಮಾಡಲಾಗುತ್ತಿದೆ. ಫಾಮ್ರ್ ಲ್ಯಾಂಡ್ನಲ್ಲಿ ಆಕರ್ಷಕ ‘ಎ’ ಆಕಾರದ ಕೆಲ ಕಾಟೇಜ್ಗಳನ್ನು ನಿರ್ವಿುಸಲಾಗಿದೆ. ಯೋಜನೆ ಚಾಲನೆ ದೊರೆತ ಒಂದು ತಿಂಗಳಲ್ಲೇ ಶೇ.50 ನಿವೇಶನಗಳು ಮಾರಾಟವಾಗಿದ್ದು, ಬೇಡಿಕೆ ಹೆಚ್ಚಿದೆ. ಫಾಮ್ರ್ ಲ್ಯಾಂಡ್ಗೆ ಹೊಂದಿಕೊಂಡಂತೆ ಮೂರು ಎಕರೆ ಪ್ರದೇಶದಲ್ಲಿ ರೆಸಾರ್ಟ್ ನಿರ್ಮಾಣ ಕಾರ್ಯ ಸಾಗುತ್ತಿದ್ದು, ಇನ್ನೊಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ.ಕಾಟೇಜ್ಗೆ ಬಾಡಿಗೆಗೆ ಬರುವವರು ಹಾಗೂ ಸ್ವಂತಕ್ಕೆ ಮನೆ ಮಾಡಿಕೊಳ್ಳುವವರು ಹಾಗೂ ವಾರಾಂತ್ಯ ಕಳೆಯಲು ಬರುವವರಿಗೆ ಹಸಿರು ಪರಿಸರದ ಜತೆಗೆ ರೆಸಾರ್ಟ್ನಲ್ಲಿ ಕುಟುಂಬದವರೊಂದಿಗೆ ಕಾಲ ಕಳೆಯಬಹುದಾಗಿದೆ.
ಹಲವು ಸೌಲಭ್ಯಗಳು
‘ಮೌಂಟೇನ್ಸ್ ಆಂಡ್ ಮ್ಯಾಂಗೋಸ್’ ಫಾಮ್ರ್ ಲ್ಯಾಂಡ್ನಲ್ಲಿ ಕುದುರೆ ಸವಾರಿ, ಹಸು, ಕರು, ಮೇಕೆ, ಮೊಲ ಸೇರಿ ಇತರೆ ಪ್ರಾಣಿ ಪಕ್ಷಿಗಳೊಂದಿಗೆ ಸಮಯ ಕಳೆಯಲು ಅವಕಾಶ, ಸೋಲಾರ್ ಪ್ಯಾನಲ್ ಲೈಟ್ ಏರಿಯಾ, ಬಾರ್ಬೆಕ್ಯೂ ವಲಯ, ದನ ಕರುಗಳು ಮೇಯಲು ಹುಲ್ಲುಗಾವಲು, ರೆಸಾರ್ಟ್ ಜತೆಗೆ ರೆಸ್ಟೋರೆಂಟ್, ಕ್ಲಬ್ ಹೌಸ್, ಸ್ವಿಮ್ಮಿಂಗ್ ಪೂಲ್, ಟಾಡ್ಲರ್ ಪ್ಲೂಲ್, ವಾಕಿಂಗ್, ಜಾಗಿಂಗ್ ಮತ್ತು ಸೈಕ್ಲಿಂಗ್ ಟ್ರಾ್ಯಕ್ ಸೇರಿ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು. ಇದೀಗ ರಾಮನಗರವು ಬೆಂಗಳೂರು ದಕ್ಷಿಣ ಜಿಲ್ಲೆ ಹೆಸರು ಪಡೆಯುವ ಮೂಲಕ ಹೆಚ್ಚಿನ ಅಭಿವೃದ್ಧಿ ಹೊಂದಲಿದ್ದು, ಮೂಲಸೌಕರ್ಯ ಯೋಜನೆಗಳ ಭರವಸೆ ನೀಡಿದೆ. ‘ಮೌಂಟೇನ್ಸ್ ಆಂಡ್ ಮ್ಯಾಂಗೋಸ್’ ಫಾಮ್ರ್ ಲ್ಯಾಂಡ್ಗೆ ಬೆಂಗಳೂರು- ಮೈಸೂರು ಎಕ್ಸ್ಪ್ರೆಸ್ ಹೆದ್ದಾರಿಯಿಂದ ಕೇವಲ 7-8 ನಿಮಿಷಗಳ ಪ್ರಯಾಣ. ಎಸ್ಟಿಆರ್ಆರ್ ರಸ್ತೆಗೆ (ಸೆಟಲೈಟ್ ಟೌನ್ ರಿಂಗ್ ರೋಡ್) 500 ಮೀಟರ್ ಸಮೀಪದಲ್ಲಿದೆ. ನೈಸ್ ರಸ್ತೆ ಜಂಕ್ಷನ್ನಿಂದ ಕೇವಲ 25 ನಿಮಿಷಗಳ ದೂರದಲ್ಲಿದೆ.
ಪ್ರೈಡ್ ಇಂಡಿಯಾ ಪ್ರಶಸ್ತಿ
ಹೈಲಿವಿಂಗ್ ಎಸ್ಟೇಟ್ಸ್ ಈಗಾಗಲೇ ಚಿಕ್ಕಮಗಳೂರು ಮತ್ತು ಸಕಲೇಶಪುರದಲ್ಲಿ ಸುಮಾರು 100 ಎಕರೆ ಪ್ರದೇಶದಲ್ಲಿ ‘ಕಾಫಿ ಪೆಪ್ಪರ್ ಎಸ್ಟೇಟ್ಸ್’ ಯೋಜನೆಯನ್ನು ಪೂರ್ಣಗೊಳಿಸಿದೆ. ನೂರಾರು ಗ್ರಾಹಕರನ್ನು ಸಂತೃಪ್ತಿಪಡಿಸಿದೆ. ರಿಯಲ್ಎಸ್ಟೇಟ್ ವಲಯದಲ್ಲಿ ಅತ್ಯುತ್ತಮ ಕೃಷಿಭೂಮಿ ಮತ್ತು ರೆಸಾರ್ಟ್ ಪರಿಕಲ್ಪನೆಯಲ್ಲಿ ಹೈ ಲಿವಿಂಗ್ ಎಸ್ಟೇಟ್ಸ್ 2023ರಲ್ಲಿ ಪ್ರೖೆಡ್ ಇಂಡಿಯಾ ಪ್ರಶಸ್ತಿಗೆ ಭಾಜನವಾಗಿದೆ.
ಫಾಮ್ರ್ ಲ್ಯಾಂಡ್ಗೆ ಹೊಂದಿಕೊಂಡಂತೆ ರೆಸಾರ್ಟ್ ಇರುವುದರಿಂದ ಗ್ರಾಹಕರು ಮನೆ ಇಲ್ಲವೇ ಕಾಟೇಜ್ ನಿರ್ವಿುಸಿ ಬಾಡಿಗೆಗೆ ನೀಡಿದರೆ ತಿಂಗಳಿಗೆ ಒಂದೂವರೆ ಲಕ್ಷ ರೂ.ಗಳಿಗೂ ಅಧಿಕ ಆದಾಯ ಗಳಿಸಬಹುದು. ಸ್ವಂತಕ್ಕೆ ಬಳಕೆ ಮಾಡುವವರು ವಾರಾಂತ್ಯವನ್ನು ಸಂತೋಷವಾಗಿ ಕಳೆಯಬಹುದಾಗಿದೆ.
| ಪ್ರತೀತ್ ವ್ಯವಸ್ಥಾಪಕ ನಿರ್ದೇಶಕ, ಹೈ ಲಿವಿಂಗ್ ಎಸ್ಟೇಟ್ಸ್