ಶ್ರೀ ರಾಮರಥೋತ್ಸವ

Sudhee_17_Rathotsava_@_Gali_Anjaneya_Temple (2)
Published on

ಬೆಂಗಳೂರು: ಮೈಸೂರು ರಸ್ತೆಯ ಗಾಳಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಬುಧವಾರ ವಿಶೇಷವಾಗಿ ‘ಶ್ರೀ ರಾಮರಥೋತ್ಸವ’ ಜರುಗಿತು.

ಬೆಳಗ್ಗೆ ಶ್ರೀರಾಮ, ಸೀತೆ, ಲಕ್ಷ್ಮಣ ಹಾಗೂ ಆಂಜನೇಯ ಸ್ವಾಮಿಗೆ ಅಭಿಷೇಕ ಹಾಗೂ ಮಹಾಮಂಗಳಾರತಿ ನಡೆಯಿತು. ದೇವಳದ ಹೊರಭಾಗದಲ್ಲಿ ಅರವಿಂಟಿಗೆ ಪೂಜೆ ಹಾಗೂ ಉತ್ಸವಗಳು ನಡೆದವು. ಮಧ್ಯಾಹ್ನ ಮಂಗಳವಾದ್ಯ ಸಹಿತ ದೇವಳದ ಆವರಣದಿಂದ ಹೊರಟ ‘ಶ್ರೀರಾಮರಥೋತ್ಸವ’ ಸಾಗಿತು.

ಭಕ್ತರಿಗೆ ಪಾನಕ, ಮಜ್ಜಿಗೆ, ಕೋಸಂಬರಿ ವಿತರಣೆಯೂಂದಿಗೆ ಅನ್ನಸಂತರ್ಪಣೆಯೂ ನಡೆಯಿತು. ಸಂಜೆ ಗಜೇಂದ್ರ ಮೋಕ್ಷ ಮತ್ತು ಗಜೇಂದ್ರ ವಾಹನೋತ್ಸವ, ಹಂಸವಾಹನೋತ್ಸವದಲ್ಲಿ ನೂರಾರು ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net