ಶ್ರೀರಾಮ ಭಾವಚಿತ್ರ ಮೆರವಣಿಗೆ

04-GPT-2
ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಕುಂಬಾರ ಜನಾಂಗದ ವತಿಯಿಂದ ಶನಿವಾರ ಶ್ರೀರಾಮೋತ್ಸವ ನಡೆಯಿತು.
Published on

ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಶ್ರೀರಾಮೋತ್ಸವದ ಅಂಗವಾಗಿ ಕುಂಬಾರ ಜನಾಂಗದ ವತಿಯಿಂದ ಶನಿವಾರ ಶ್ರೀರಾಮ ಭಾವಚಿತ್ರ ಮೆರವಣಿಗೆ ಮಾಡಲಾಯಿತು.

ಇತ್ತೀಚೆಗೆ ನಿರ್ಮಿಸಿದ ಚಿಕ್ಕ ರಥದಲ್ಲಿ ಶ್ರೀ ಸೀತಾರಾಮ, ಲಕ್ಷ್ಮಣ ಹಾಗೂ ಆಂಜನೇಯರ ಭಾವಚಿತ್ರವನ್ನು ಇರಿಸಿ ಗ್ರಾಮದ ಲಕ್ಷ್ಮೀವರದರಾಜಸ್ವಾಮಿ ದೇವಾಲಯದ ಬಳಿಯಿಂದ ಮಂಗಳವಾದ್ಯ, ಗಾರುಡಿಗೊಂಬೆ, ಕೀಲುಕುದುರೆ, ಮುಂತಾದ ಜನಪದ ಕಲಾತಂಡಗಳೊಡನೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ದಾರಿಯುದ್ದಕ್ಕೂ ಇರುವ ಅಂಗಡಿ ಹಾಗೂ ನಿವಾಸಿಗಳು ಮೆರವಣಿಗೆಗೆ ಪೂಜೆ ಸಲ್ಲಿಸಿ ಕೃತಾರ್ಥರಾದರು. ನಾನಾ ಅಂಗಡಿಯವರು ಭಕ್ತರಿಗೆ ಪಾನಕ, ಮಜ್ಜಿಗೆ ವಿತರಿಸಿದರು. ಜನಾಂಗದ ಮುಖಂಡರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net