ವಿವಿಧೆಡೆ ಶ್ರೀರಾಮ ನವಮಿ ಆಚರಣೆ

Oplus_131072
Oplus_131072
Published on

ಯಳಂದೂರು: ಪಟ್ಟಣ, ತಾಲೂಕು ಸೇರಿದಂತೆ ಸುತ್ತಲ ಗ್ರಾಮಗಳಲ್ಲಿ ಬುಧವಾರ ಶ್ರೀರಾಮ ನವಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು.


ಪಟ್ಟಣದ ದೇವಾಂಗ ಬೀದಿ, ಬಳೇಪೇಟೆಯಲ್ಲಿರುವ ಶ್ರೀರಾಮಮಂದಿರ, ಯರಿಯೂರು, ಅಂಬಳೆ, ಬಿಳಿಗಿರಿರಂಗನಬೆಟ್ಟ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ರಾಮಮಂದಿರಗಳನ್ನು ತಳಿರು, ತೋರಣ, ಹೂವುಗಳಿಂದ ಸಿಂಗರಿಸಲಾಗಿತ್ತು. ಬೆಳಗ್ಗೆಯಿಂದಲೇ ಶ್ರೀರಾಮ ದೇವರ ಭಾವಚಿತ್ರವನ್ನು ಹೂವುಗಳಿಂದ ಸಿಂಗರಿಸಿ ರಾಮನಾಮ ಹಾಡಿ, ನೈವೇದ್ಯಗಳನ್ನಿಟ್ಟು ವಿಶೇಷ ಪೂಜೆ ನೆರವೇರಿಸಲಾಯಿತು.
ಭಕ್ತರಿಗೆ ನೀರು ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net