ಶ್ರೀಪರಮಾನಂದ ದೇವರ ಜಾತ್ರಾ ಮಹೋತ್ಸವ 8ರಿಂದ

4KSH1
Published on

ಕೋ.ಶಿವಾಪುರ: ಸಮೀಪದ ಮಾಡಮಗೇರಿ ಗ್ರಾಮದಲ್ಲಿ ಶ್ರೀಪರಮಾನಂದ ದೇವರ 14ನೇ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ಮಾ.8 ರಿಂದ 12ರ ವರಗೆ ಹಮ್ಮಿಕೊಳ್ಳಲಾಗಿದೆ.

ಮಾ.8ರಂದು ಬೆಳಗ್ಗೆ 5 ಗಂಟೆಗೆ ಹೋಮ, ಕುಂಕುಮಾರ್ಚನೆ, 6.30ಕ್ಕೆ ತೇರಿನ ಕಳಸಾರೋಹನ, ರಾತ್ರಿ 10ಕ್ಕೆ ನಾಟಕ ಪ್ರದರ್ಶನಗೊಳ್ಳಲಿದೆ. ಮಾ.9ರಂದು ಬೆಳಗ್ಗೆ 7.30ಕ್ಕೆ ಪರಮಾನಂದ ಮಠದಿಂದ ಪಲ್ಲಕ್ಕಿ ಉತ್ಸವ, ಕುಂಭ ಮೇಳ, ನಂದಿಕೋಲ ಹಾಗೂ ವಾದ್ಯಮೇಳಗಳೊಂದಿಗೆ ಮೆರವಣಿಗೆೆ ಜರುಗುವುದು. ರಾತ್ರಿ 10 ಗಂಟೆಗೆ ರಸಮಂಜರಿ ಕಾರ್ಯಕ್ರಮ ಜರುಗಲಿದೆ.

ಮಾ.10ರಂದು ಮಹಾ ರುದ್ರಾಭಿಷೇಕ ಬೆಳಗ್ಗೆ 7.30ಕ್ಕೆ ಶ್ರೀವಿರಭದ್ರೇಶ್ವರ ಗುಗ್ಗಳೋತ್ಸವ, 10.30ಕ್ಕೆ ಶ್ರೀಪರಮಾನಂದ ದೇವರ ಕಲ್ಯಾಣೋತ್ಸವ ಮಧ್ಯಾಹ್ನ 3 ಗಂಟೆಗೆ ಕಲ್ಲಯ್ಯ ಅಜ್ಜನವರ ತುಲಾಭಾರ, 5 ಗಂಟೆಗೆ ಹಗ್ಗ ಇಲ್ಲದ ಮಹಾರಥೋತ್ಸವದ ನಂತರ ಗಜರಾಜನೊಂದಿಗೆ ಪಲ್ಲಕ್ಕಿ ಉತ್ಸವ ಮರಳುವುದು.

ಮಾ.11ರಂದು ಸಂಜೆ 6 ಗಂಟೆಗೆ ಲ ದೀಪೋತ್ಸವ, ಟಗರಿನ ಕಾಳಗ ಜರಗುವುದು. ಕಲ್ಲಯ್ಯ ಅಜ್ಜನವರು ಸಾನ್ನಿಧ್ಯ ವಹಿಸುವರು, ಮಾಡಮಗೇರಿ ಗ್ರಾಪಂ ಅಧ್ಯ ಲಕ್ಕಪ್ಪ ಸನ್ನಿಂಗನವರ ಅಧ್ಯತೆ ವಹಿಸುವರು. ಶಾಸಕ ವಿಶ್ವಾಸ ವೈದ್ಯ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಬಸವರಾಜ ಕಲ್ಯಾಣಶಟ್ಟಿ, ಪಾಂಡಪ್ಪ ಪಾಟೀಲ, ಸೈದಪ್ಪ ಗದಾಡಿ, ವೈ.ಎಚ್​.ಶೇರಿ, ಮಾಡಮಗೇರಿ ಪಿಡಿಒ ಈರಪ್ಪ ಹವಳಪ್ಪನವರ ಪಾಲ್ಗೊಳ್ಳುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net