ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಾರ್ಷಿಕೋತ್ಸವ

New Project (9)
Published on

ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಡಬ ತಾಲೂಕು ಬಿಳಿನೆಲೆ ವಲಯದ ಕೊಣಾಜೆ ಒಕ್ಕೂಟ ವಾರ್ಷಿಕೋತ್ಸವ ಕೊಣಾಜೆ ಶ್ರೀ ದುಗಾರ್ಂಬಿಕಾ ಸಭಾಭವನದಲ್ಲಿ ನಡೆಯಿತು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕ ಎ.ಬಾಬು ನಾಯ್ಕ ಶುಭಹಾರೈಸಿದರು. ಒಕ್ಕೂಟ ಸ್ಥಾಪಕ ಅಧ್ಯಕ್ಷ ಶಿವಪ್ಪ ಗೌಡ ಹಾಕೋಟೆಕಾನ ಉದ್ಘಾಟಿಸಿದರು. ಒಕ್ಕೂಟದ ಅಧ್ಯಕ್ಷ ಡೀಕಯ್ಶ ಗೌಡ ಹಾಕೋಟೆಕಾನ ಅಧ್ಯಕ್ಷತೆ ವಹಿಸಿದ್ದರು. ಕಡಬ ತಾಲೂಕು ಕೇಂದ್ರ ಒಕ್ಕೂಟ ಸಮಿತಿ ಅಧ್ಯಕ್ಷ ಸಂತೋಷ್, ತಾಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್, ಕೊಣಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ, ಒಕ್ಕೂಟ ನಿಕಟಪೂರ್ವ ಅಧ್ಯಕ್ಷರಾದ ಪುಂಡರೀಕಾಕ್ಷ ಮುಚ್ಚಿರೋಡಿ, ರುಚಂದ್ರ ಮನೆಜಾಲು, ಭಾಸ್ಕರ ಗೌಡ ದೊಡ್ಡಮನೆ ಮೊದಲಾದವರಿದ್ದರು.

ಕೊಣಾಜೆ ಒಕ್ಕೂಟದ 35 ಸಂಘಗಳಲ್ಲಿನ ಕುಶಾಲಪ್ಪ ಗೌಡ, ನಾರಾಯಣ ಗೌಡ ಸೀತಮ್ಮ, ಪುಷ್ಪಾವತಿ ಹಾಗೂ ಪುಟ್ಟಣ್ಣ ಗೌಡ ಅವರನ್ನು ಹಿರಿಯ ಸದಸ್ಯರೆಂದು ಗುರುತಿಸಿ ಗೌರವಿಸಲಾಯಿತು. ಒಕ್ಕೂಟ ಸದಸ್ಯರಿಗೆ ನಡೆಸಿದ ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಲಾಯಿತು. ಒಕ್ಕೂಟ ಕಾರ್ಯದರ್ಶಿ ವೆಂಕಟ್ರಮಣ ಗೌಡ ಒಕ್ಕೂಟದ ಸಾಧನಾ ವರದಿ ವಾಚಿಸಿದರು. ಕೊಣಾಜೆ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಬೇಬಿ ಸ್ವಾಗತಿಸಿದರು. ನಿಕಟಪೂರ್ವ ಕಾರ್ಯದರ್ಶಿ ಮುತ್ತಪ್ಪ ಗೌಡ ವಂದಿಸಿದರು. ಬಿಳಿನೆಲೆ ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net