

ಸುಬ್ರಹ್ಮಣ್ಯ: ಐನೆಕಿದು ಬಸ್ ನಿಲ್ದಾಣದಲ್ಲಿರುವ ಹಾಲು ಉತ್ಪಾದಕ ಸಹಕಾರ ಸಂಘದ ಕಚೇರಿ ಮತ್ತು ಪಕ್ಕದ ಅಂಗಡಿಯಿಂದ ಕಳವುಗೈದ ಪ್ರಕರಣದ ಆರೋಪಿ ಮಂಜೇಶ್ವರದ ಸತೀಶ್(40) ಎಂಬಾತನ್ನು ಸುಬ್ರಹ್ಮಣ್ಯ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಆರೋಪಿ ಬಳಸಿದ ಮದ್ಯದ ಸ್ಯಾಚೇಟ್ ಆಧಾರದಲ್ಲಿ ಸುಳಿವಿನ ಜಾಡು ಹಿಡಿದ ಪೊಲೀಸರು ಸುಬ್ರಹ್ಮಣ್ಯದ ಬಾರ್ ಒಂದರ ಸಹಾಯಕನ ಸಹಕಾರದಲ್ಲಿ ಆರೋಪಿಯನ್ನು ಬಂಧಿಸಿ, ಆತನಿಂದ ಒಟ್ಟು 3,057 ರೂ. ವಶಪಡಿಸಿದ್ದಾರೆ. ಬಳಿಕ ಆತನನ್ನು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.