ಬ್ರಹ್ಮಕಲಶ, ನಿಧಿಸಮರ್ಪಣಾ ಕಾರ್ಯಕ್ಕೆ ಚಾಲನೆ : ಮಿಂಚಿಪದವು ಶ್ರೀ ಕಾವೇರಮ್ಮ ಮಹಾಲಿಂಗೇಶ್ವರ ದೇವಸ್ಥಾನ

New Project (6)
Published on

ಕಾಸರಗೋಡು: ಬೆಳ್ಳೂರು ಮಿಂಚಿಪದವು ಶ್ರೀ ಕಾವೇರಮ್ಮ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ, ಬ್ರಹ್ಮಕಲಶ ಸಮಿತಿ ರಚನೆ, ವಿಜ್ಞಾಪನಾ ಪತ್ರ ಬಿಡುಗಡೆ ಹಾಗೂ ನಿಧಿ ಸಮರ್ಪಣಾ ಕಾರ್ಯಕ್ರಮ ಶ್ರೀ ಕ್ಷೇತ್ರ ಸಭಾಂಗಣದಲ್ಲಿ ಜರುಗಿತು.

ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಸಮಾರಂಭ ಉದ್ಘಾಟಿಸಿ, ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿ ನಿಧಿ ಕುಂಭಕ್ಕೆ ಚಾಲನೆ ನೀಡಿದರು. ವಕೀಲ ದಾಮೋದರ ಎಂ.ಅಧ್ಯಕ್ಷತೆ ವಹಿಸಿದ್ದರು. ರವೀಶ ತಂತ್ರಿ ಕುಂಟಾರು ದಿಕ್ಸೂಚಿ ಭಾಷಣ ಮಾಡಿದರು. ಬ್ರಹ್ಮಕಲಶ ಹಾಗೂ ಜೀರ್ಣೋದ್ಧಾರ ಸಮಿತಿಗಳನ್ನು ರಚಿಸಲಾಯಿತು. ವಸಂತ ಪೈ ಬದಿಯಡ್ಕ ಅವರನ್ನು ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶ ಸಮಿತಿಯ ಗೌರವಾಧ್ಯಕ್ಷರಾಗಿಯೂ, ಮಧುಸೂದನ ಆಯರ್ ಮಂಗಳೂರು ಅವರನ್ನು ಅಧ್ಯಕ್ಷರಾಗಿಯೂ ಆಯ್ಕೆ ಮಾಡಲಾಯಿತು. ಕಾರ್ಯಾಧ್ಯಕ್ಷರಾಗಿ ವಕೀಲ ದಾಮೋದರ ಎಂ., ಪ್ರಧಾನ ಕಾರ್ಯದರ್ಶಿಯಾಗಿ ವಕೀಲ ಶಿವರಾಮ, ಕೋಶಾಧಿಕಾರಿಯಾಗಿ ನಾರಾಯಣ ಕೇಕಡ್ಕ, ಕಾರ್ಯದರ್ಶಿಯಾಗಿ ಜಯಕರ ಎಂ. ಮಿಂಚಿಪದವು ಅವರನ್ನು ಆಯ್ಕೆ ಮಾಡಲಾಯಿತು.

ಚಿದಾನಂದ ಕೆದಿಲಾಯ, ಸೇವಾ ಸಮಿತಿಯ ಸದಾನಂದ ಅಡ್ಕ, ಚಂದ್ರಶೇಖರ ಎಂ.ಎನ್., ರಾಘವ ಎಂ.ಎನ್., ರಾಮಚಂದ್ರ ಉಪಸ್ಥಿತರಿದ್ದರು. ಶಿವರಾಮ ಮಣಿಯಾಣಿ ಸ್ವಾಗತಿಸಿದರು. ಗಂಗಾಧರ ಕೊಂಡೆಯೂರು ನಿರೂಪಿಸಿದರು. ಮನೋಜ್ ಎಂ.ಸಿ. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net