ರಾಮನ ಗುಣ ಅಳವಡಿಸಿದರೆ ರಾಮರಾಜ್ಯದ ಕನಸು ನನಸು: ಹುಟ್ಟೂರ ಗುರುವಂದನೆ ಸ್ವೀಕರಿಸಿ ಪೇಜಾವರ ಶ್ರೀ ಆಶೀರ್ವಚನ

gorva
Published on

ವಿಜಯವಾಣಿ ಸುದ್ದಿಜಾಲ ಕಟೀಲು ನಮ್ಮ ಗುರಿ ರಾಮ ಮಂದಿರ ನಿರ್ಮಾಣ ಅಲ್ಲ, ರಾಮ ರಾಜ್ಯ ನಿರ್ಮಾಣ. ಇವತ್ತು ಕಾಣುವುದು ರಾಮ ರಾಜ್ಯವಲ್ಲ, ಇದು ಪ್ರಜಾ ರಾಜ್ಯ. ಆದ್ದರಿಂದ ಪ್ರಜೆಗಳೆಲ್ಲ ರಾಮನ ಗುಣವನ್ನು ಅಳವಡಿಸಿಕೊಂಡರೆ ರಾಮ ರಾಜ್ಯದ ಕನಸು ನನಸಾಗುವುದು ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು. ಕಟೀಲು ರಥಬೀದಿಯಲ್ಲಿ ಶ್ರೀ ಕಟೀಲು ಪ್ರತಿಷ್ಠಾನ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಕಟೀಲು ಕಲಾ ಉತ್ಸವದಲ್ಲಿ ಹುಟ್ಟೂರ ಗುರುವಂದನೆ ಸ್ವೀಕರಿಸಿ ಆಶೀರ್ವಚನ ನೀಡಿದರು. ಉಪ್ಪಳ ನಿತ್ಯಾನಂದ ಯೋಗಾಶ್ರಮದ ಯೋಗಾನಂದ ಸರಸ್ವತೀ ಸ್ವಾಮೀಜಿ ಮಾತನಾಡಿದರು. ಅಯೋಧ್ಯೆ ರಾಮ ಮಂದಿರದಲ್ಲಿ ಇಲೆಕ್ಟ್ರಿಕ್ ಕೆಲಸ ನಿರ್ವಹಿಸಿದ ರಾಜೇಶ್ ಶೆಟ್ಟಿ ಅವರಿಗೆ ಸಾಧಕ ಸನ್ಮಾನ, ಸುರಗಿರಿ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ರಾಜೇಶ್ ಶೆಟ್ಟಿ ಅತ್ತೂರು ಅವರಿಗೆ ಕಟೀಲು ಪ್ರತಿಷ್ಠಾ ಸನ್ಮಾನ ನಡೆಯಿತು. ಎಂ.ನಾರಾಯಣ್, ಅರುಣಾ ರಾವ್ ಕಟೀಲು, ಶ್ರಾವ್ಯ ಕಿಶೋರ್ ಅವರಿಗೆ ಶಿಕ್ಷಕ ಸನ್ಮಾನ ಮಾಡಲಾಯಿತು. ಭಜನಾ ಸ್ಪರ್ಧೆ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ವೇದವ್ಯಾಸ ತಂತ್ರಿ, ವಾಸುದೇವ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಕಮಲಾದೇವಿ ಪ್ರಸಾದ ಆಸ್ರಣ್ಣ, ಹರಿಕೃಷ್ಣ ಪುನರೂರು, ಸನತ್ ಕುಮಾರ್ ಶೆಟ್ಟಿ, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ ಜೈನ್, ಉದ್ಯಮಿಗಳಾದ ಶಶಿಧರ ಶೆಟ್ಟಿ ಬರೋಡ, ಐಕಳ ಗಣೇಶ್ ಶೆಟ್ಟಿ, ಸೂರ್ಯಕುಮಾರ್ ಹಳೆಯಂಗಡಿ, ಸುರೇಶ್ ರಾವ್ ಕಟೀಲು, ಎಂ.ಬಿ.ಪುರಾಣಿಕ್, ಪ್ರದೀಪ್ ಕುಮಾರ್ ಕಲ್ಕೂರ, ಲೀಲಾಕ್ಷ ಕರ್ಕೇರ, ಅನಂತ ಆಸ್ರಣ್ಣ, ಶ್ರೀಧರ ಪೂಜಾರಿ, ಅಶೋಕ್ ಹಾರನಹಳ್ಳಿ, ವೇಣುಗೋಪಾಲ ಶೆಟ್ಟಿ, ನಿಶಾನ್ ಉಳ್ಳಾಲ್, ಐಕಳ ಆನಂದ ಶೆಟ್ಟಿ, ದೇವೇಂದ್ರ ಬನ್ನಾನ್, ಸುರೇಶ್ ಶೆಟ್ಟಿ, ಪ್ರಕಾಶ್ ಪಿ.ಎಸ್., ವಿಶ್ವನಾಥ ಹೆಗ್ಡೆ, ಭಾಸ್ಕರ್ ಅಳ್ವ, ರಾಘವೇಂದ್ರ ಭಟ್ ಮತ್ತಿತರರು ಉಪಸ್ಥಿತರಿದ್ದರು. ಹರಿನಾರಾಯಣ ದಾಸ ಆಸ್ರಣ್ಣ ಅಭಿನಂದನೆ ಸಲ್ಲಿಸಿದರು. ಅನಂತಪದ್ಮನಾಭ ಆಸ್ರಣ್ಣ ಸ್ವಾಗತಿಸಿದರು. ಸಾಯಿನಾಥ ಶೆಟ್ಟಿ ಮತ್ತು ನಿತೇಶ್ ಶೆಟ್ಟಿ ಎಕ್ಕಾರು ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ಪ್ರತಿಷ್ಠಾನದ ಮಕ್ಕಳಿಂದ ಮತ್ತು ರಕ್ಷಕರಿಂದ ಭರತನಾಟ್ಯ ಹಾಗೂ ಸತ್ಯಹರಿಶ್ಚಂದ್ರ ನಾಟಕ ಪ್ರದರ್ಶನ ನಡೆಯಿತು.

ಪೇಜಾವರ ಹಿರಿಯ ಸ್ವಾಮಿಗಳು ಸನಾತನ ಧರ್ಮದ ಬಗ್ಗೆ ಕ್ರಾಂತಿ ಮಾಡಿದವರು. ತಾಯಿಯ ಸ್ವರೂಪದಂತೆ ಮಕ್ಕಳಿಗೆ ಮಾರ್ಗದರ್ಶನ ಮಾಡಿದವರು. ಸಮಾಜಕ್ಕೆ ಶಕ್ತಿ ತುಂಬಬಲ್ಲವರಾಗಿದ್ದರು. ಅಂತಹ ಹಿರಿಯ ಸ್ವಾಮಿಗಳಂತೆಯೇ ಕಿರಿಯ ಸ್ವಾಮಿಗಳೂ ಸಮಾಜಮುಖಿಯಾಗಿ ತೊಡಗಿಸಿಕೊಂಡಿರುವುದು ಅಭಿನಂದನೀಯ. ಯೋಗಾನಂದ ಸರಸ್ವತೀ ಸ್ವಾಮೀಜಿ, ಉಪ್ಪಳ ನಿತ್ಯಾನಂದ ಯೋಗಾಶ್ರಮ

ಭಜನಾ ಸ್ಪರ್ಧೆ ವಿಜೇತರು 18ವರ್ಷಕ್ಕಿಂತ ಕೆಳಗಿನ ಮಕ್ಕಳ ಭಜನಾ ತಂಡ: ಪ್ರಥಮ- ಶಿವರಂಜನಿ ಸುರತ್ಕಲ್, ದ್ವಿತೀಯ- ಗಾನಸಿರಿ ಕಲಾಕೇಂದ್ರ ಪುತ್ತೂರು, ತೃತೀಯ- ಗಾನ ಮಂದಾರ ಭಜನಾ ಮಂಡಳಿ ಸುರತ್ಕಲ್. 13ವರ್ಷಕ್ಕಿಂತ ಕೆಳಗಿನ ಮಕ್ಕಳ ಭಜನಾ ತಂಡ: ಪ್ರಥಮ- ಗಾನಸಿರಿ ಕಲಾಕೇಂದ್ರ ಪುತ್ತೂರು, ದ್ವಿತೀಯ- ಶಿವರಂಜನಿ ಸುರತ್ಕಲ್, ತೃತೀಯ- ಸಾಕ್ಷಾತ್ ಶಿವ ಭಜನಾ ಮಂಡಳಿ ಚಾರ್ವಕ. 19 ವರ್ಷ ಮೇಲ್ಪಟ್ಟ ಭಜನಾ ತಂಡ: ಪ್ರಥಮ- ಗಾಯನ ಮಿತ್ರರು ಸುರತ್ಕಲ್, ದ್ವಿತೀಯ- ಗಾನ ಸುರಭಿ ಮಲ್ಪೆ, ತೃತೀಯ- ಶಿವರಂಜನಿ ಸುರತ್ಕಲ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net