ಗುರು ತತ್ವ ಸರ್ವಕಾಲಕ್ಕೂ ಪ್ರಸ್ತುತ : ಚಂದ್ರಶೇಖರ ನಾನಿಲ್ ಬಣ್ಣನೆ

New Project (34)
Published on

ಹಳೆಯಂಗಡಿ: ಜನಜಾಗೃತಿಯ ಹರಿಕಾರ, ಸರ್ವರಲ್ಲಿಯೂ ದೇವರನ್ನು ಕಾಣುವ ತತ್ವದ ಮೂಲಕ ಸಂಘಟನೆ ಮತ್ತು ಶಿಕ್ಷಣಕ್ಕೆ ಆದ್ಯತೆ ನೀಡಿದ ಪವಾಡ ಪುರುಷ ಶ್ರೀ ನಾರಾಯಣ ಗುರುಗಳ ಜೀವನ ತತ್ವ, ಸರ್ವಕಾಲಕ್ಕೂ ಪ್ರಸ್ತುತ ಎಂದು ಹಳೆಯಂಗಡಿ ಬಿಲ್ಲವ ಸಂಘದ ಅಧ್ಯಕ್ಷ ಚಂದ್ರಶೇಖರ ನಾನಿಲ್ ಹೇಳಿದರು.

ಹಳೆಯಂಗಡಿಯ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಶ್ರೀ ಗುರು ಜಯಂತಿಯ ಪ್ರಯುಕ್ತ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುಂಜಾನೆ ಗುರುಮೂರ್ತಿಗೆ ಪಂಚಾಮೃತ ಅಭಿಷೇಕ, ಹಳೆಯಂಗಡಿ ಯುವವಾಹಿನಿ ಮತ್ತು ಸಂಘದ ಸದಸ್ಯರಿಂದ ಭಜನಾ ಸಂಕೀರ್ತನೆ, ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಸಂಘದ ಗೌರವಾಧ್ಯಕ್ಷ ಗಣೇಶ್ ಬಂಗೇರ, ಪ್ರಧಾನ ಕಾರ್ಯದರ್ಶಿ ಹಿಮಕರ್ ಟಿ.ಸುವರ್ಣ ಕಲ್ಲಾಡಿ, ಕೋಶಾಧಿಕಾರಿ ರಮೇಶ್ ಬಂಗೇರ, ಉಪಾಧ್ಯಕ್ಷರಾದ ಜಯ ಜಿ.ಸುವರ್ಣ, ಜೈಕೃಷ್ಣ ಕೋಟ್ಯಾನ್, ಕಟ್ಟೋಣ ಸಮಿತಿ ಅಧ್ಯಕ್ಷ ಮೋಹನ್ ಎಸ್.ಸುವರ್ಣ, ಕಾರ್ಯದರ್ಶಿ ಭಾಸ್ಕರ ಸಾಲ್ಯಾನ್, ಕೋಶಾಧಿಕಾರಿ ಯಶೋಧರ ಎಸ್. ಸಾಲ್ಯಾನ್, ಮುಂಬೈ, ದುಬೈ, ಮಸ್ಕತ್ ಸಮಿತಿಯ ಕಾರ್ಯಕಾರಿ ಸಮಿತಿ, ಅಧ್ಯಕ್ಷರು ಮತ್ತು ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net