ಗುರುಗಳ ಸಂದೇಶದಿಂದ ಬಹುವಿಧ ಕತ್ತಲು ದೂರ : ಯುವವಾಹಿನಿ ಮಾಜಿ ಅಧ್ಯಕ್ಷ ಪ್ರೇಮನಾಥ್ ಅನಿಸಿಕೆ

New Project (24)
Published on

ಬಂಟ್ವಾಳ: ವಿದ್ಯೆಯಿಂದ ಸ್ವತಂತ್ರರಾಗಿ ಎಂಬ ಮಾತಿನ ವ್ಯಾಪ್ತಿಯನ್ನು ಹಿಗ್ಗಿಸಬೇಕಾಗಿದೆ. ವಿದ್ಯೆಯಿಂದ ಸ್ವತಂತ್ರರಾಗಿ ಎಂದರೆ ಇಂದು ಶಿಕ್ಷಣ ಮತ್ತು ಉದ್ಯೋಗ ಎಂಬ ಸೀಮಿತ ಅರ್ಥವಲ್ಲ. ಮಾರುಕಟ್ಟೆ ಜಗತ್ತು ಎಲ್ಲವನ್ನು ನಿಯಂತ್ರಿಸುತ್ತಿವೆ. ಮನಸ್ಸು ಸಾಮಾಜಿಕ ಜಾಲತಾಣಗಳ ಸುಳಿಯಲ್ಲಿ ಒದ್ದಾಡುತ್ತಿವೆ. ಸ್ವತಂತ್ರ ಆಯೋಚನೆಗಳು ಮಾತ್ರ ನಮ್ಮನ್ನು ಕಾಪಾಡಬಹುದು. ಪಕ್ಷಪಾತಿಗಳ ದಾಸರಾಗದಂತೆ ತಡೆಯಬಹುದು. ಗುರುಗಳ ಸಂದೇಶ ಬೆಳಕಿನಲ್ಲಿ ವರ್ತಮಾನದ ಬಹು ಬಗೆಯ ಕತ್ತಲೆಯಿಂದ ಪಾರಾಗಬಹುದು ಎಂದು ಯುವವಾಹಿನಿ ಬಂಟ್ವಾಳ ಘಟಕ ಮಾಜಿ ಅಧ್ಯಕ್ಷ ಪ್ರೇಮನಾಥ್ ಕೆ. ತಿಳಿಸಿದರು

ಯುವವಾಹಿನಿ ಬಂಟ್ವಾಳ ಘಟಕ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರುಗಳ 171ನೇ ಜನ್ಮದಿನಾಚರಣೆ ಪ್ರಯುಕ್ತ ಗುರುಪೂಜೆಯಲ್ಲಿ ಗುರುಸಂದೇಶ ನೀಡಿದರು.

ಯುವವಾಹಿನಿ ಬಂಟ್ವಾಳ ಘಘದ ಅಧ್ಯಕ್ಷ ನಾಗೇಶ್ ಪೂಜಾರಿ ನೈಬೇಲು ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ನವೀನ್ ಪೂಜಾರಿ, ಸಲಹೆಗಾರ ಟಿ.ರಾಮಚಂದ್ರ ಸುವರ್ಣ ತುಂಬೆ, ಮಾಜಿ ಅಧ್ಯಕ್ಷರಾದ ಹರೀಶ್ ಎಸ್.ಕೋಟ್ಯಾನ್, ನಾಗೇಶ್ ಪೊನ್ನೋಡಿ, ದಿನೇಶ್ ಸುವರ್ಣ ರಾಯಿ ಮೊದಲಾದವರಿದ್ದರು. ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಹರೀಶ್ ಸಾಲ್ಯಾನ್ ಅಜೆಕಲ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net