ಶ್ರೀದೇವಿ ಆರಾಧನೆಯಿಂದ ಸಂಕಷ್ಟ ದೂರ

4SND-02
ಸಿಂಧನೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಶರನ್ನವರಾತ್ರೋತ್ಸವದ ಮೊದಲನೆಯ ದಿನದ ಕಾರ್ಯಕ್ರಮ ನಡೆಯಿತು. ಆಶ್ರಮ ಅಧ್ಯಕ್ಷ ಸದಾನಂದ ಮಹಾರಾಜ್, ಮಹಾರಾಷ್ಟ್ರ ರಾಮಕೃಷ್ಣ ಮಿಷನ್ ಕಾರ್ಯದರ್ಶಿ ಸ್ವಾಮಿ ತತ್ವರೂಪನಂದಜೀ ಮಹಾರಾಜ್, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ಆಶ್ರಮದ ದಾನಿ ರಾಜಶೇಖರರಡ್ಡಿ ಇದ್ದರು.
Published on

ಸಿಂಧನೂರು: ದೇಶದಲ್ಲಿ ಶಕ್ತಿ ದೇವತೆ ಪೂಜೆಗೆ ಹೆಚ್ಚಿನ ಮಹತ್ವ ಇದ್ದು. ಅದರಲ್ಲಿ ನವರಾತ್ರಿಯಲ್ಲಿ ನಡೆಯುವ ಪೂಜೆ ವಿಶೇಷತೆ ಪಡೆದುಕೊಂಡಿದೆ ಎಂದು ಮಹಾರಾಷ್ಟ್ರ ರಾಮಕೃಷ್ಣ ಮಿಷನ್ ಕಾರ್ಯದರ್ಶಿ ಸ್ವಾಮಿ ತತ್ವರೂಪನಂದಜೀ ಮಹಾರಾಜ್ ಹೇಳಿದರು.

ನಗರದ ಬಪ್ಪೂರ ರಸ್ತೆ ಮಾರ್ಗದಲ್ಲಿರುವ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಶರನ್ನವರಾತ್ರೋತ್ಸವದ ಮೊದಲನೇ ದಿನದ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು.

ಶ್ರೀದೇವಿ ಆರಾಧನೆ, ಪೂಜಿಸುವುದರಿಂದ ಸಂಕಷ್ಟಗಳು ದೂರಾಗುತ್ತವೆ. ಜತೆಗೆ ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗಲಿದೆ. ಆದಿಶಕ್ತಿಯಾಗಿ ನಮ್ಮನ್ನೇಲ್ಲ ಕಾಪಾಡುತ್ತಿದ್ದಾಳೆಂದರು.

ನೇತ್ರ ತಜ್ಞ ಡಾ.ಚನ್ನನಗೌಡ ಪಾಟೀಲ್ ಮಾತನಾಡಿ, ಆಶ್ರಮದಿಂದ ನಡೆಯುವ ಪ್ರತಿಯೊಂದು ಕಾರ್ಯಕ್ರಮ ಅರ್ಥಪೂರ್ಣ, ಪ್ರತಿಯೊಬ್ಬರ ಜೀವನಕ್ಕೆ ಬೇಕಾದ ಮಾರ್ಗ ನೀಡುವ ಕಾಮಧೇನು ಎಂದರು.

ಆಶ್ರಮ ಅಧ್ಯಕ್ಷ ಸ್ವಾಮಿ ಸದಾನಂದ ಮಹಾರಾಜ್, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ಆಶ್ರಮದ ದಾನಿ ರಾಜಶೇಖರರಡ್ಡಿ, ಶಿಕ್ಷಕ ಕಳಕಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net