

ಅಳವಂಡಿ: ಮಕ್ಕಳ ಭವಿಷ್ಯಕ್ಕೆ ಶಿಕ್ಷಣ ಅವಶ್ಯ. ವಿದ್ಯೆ, ವಿನಯ ಇಲ್ಲದವರು ಸಾಧಿಸಲು ಸಾಧ್ಯವಿಲ್ಲ ಎಂದು ಗದಗನ ಕೆವಿಎಸ್‌ಆರ್ ಕಾಲೇಜಿನ ಪ್ರಾಚಾರ್ಯ ಸತೀಶ ಪಾಶಿ ಹೇಳಿದರು.
ಸಮೀಪದ ಮುರ್ಲಾಪುರ ಸಹಿಪ್ರಾ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಹವೆಂಬ ಬಂಡಿ ನಡೆಯಲು ಕಾಲುಗಳು ಮುಖ್ಯ. ಜೀವನವೆಂಂಬ ಬಂಡಿ ಸಾಗಲು ಶಿಕ್ಷಣ ಮುಖ್ಯ. ಶಿಕ್ಷಣವೆಂದರೆ ಕೇವಲ ಪಠ್ಯ ಪುಸ್ತಕದ ವಿಷಯ ತಿಳಿಸುವುದಲ್ಲ. ಜೀವನದ ಹಾದಿ ತೋರಿಸಿ ಮಾನವೀಯ ಮೌಲ್ಯ ಹಾಗೂ ಸಂಸ್ಕಾರ ನೀಡುತ್ತದೆ ಎಂದರು.
ಮಾಜಿ ಸೈನಿಕ ಉಮೇಶ ಬೆಣಕಲ್ ಮಾತನಾಡಿ, ಶಾಲೆ ದೇವಾಲಯದ ಹಾಗೇ. ಇಲ್ಲಿ ರಾಜಕೀಯ ಮಾಡಬೇಡಿ. ಇದು ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗುತ್ತದೆ. ಕನ್ನಡ ಶಾಲೆಗಳು ಸಂಸ್ಕಾರ ಹಾಗೂ ಉತ್ತಮ ಶಿಕ್ಷಣ ನೀಡುತ್ತಿವೆ. ಮಕ್ಕಳು ಉತ್ತಮ ಅಂಕಗಳಿಸಿ ಶಾಲೆಗೆ, ತಂದೆ ತಾಯಿಗೆ ಕೀರ್ತಿ ತನ್ನಿ ಎಂದರು.
ಸಾಧಕರಾದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಬೀಮವ್ವ ಶಿಳ್ಳಿಕ್ಯಾತರ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೇಶಪ್ಪ ಶಿಳ್ಳಿಕ್ಯಾತರ ಅವರನ್ನು ಸನ್ಮಾನಿಸಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷ ಯಮನೂರಪ್ಪ ಕಟಗಾಲಿ, ಉಪಾಧ್ಯಕ್ಷ ಪುಷ್ಪಾ ರಮೇಶ ವಾಲಿಕಾರ, ಮುಖ್ಯಶಿಕ್ಷಕರಾದ ಗೊಣೆಪ್ಪ ಮ್ಯಾಗಡೆ ಗುರುರಾಜ ಪಾಟೀಲ, ವೆಂಕರಡ್ಡಿ ಇಮ್ಮಡಿ, ಪ್ರಮುಖರಾದ ಅಂದಾನಗೌಡ ಪೊಲೀಸ್ ಪಾಟೀಲ್, ಮಲ್ಲನಗೌಡ, ದೇವಪ್ಪ, ಮಹಾಲಿಂಗಪ್ಪ, ಮಾರುತಿ ಶಂಕರ್, ಹನುಮಂತಪ್ಪ ಗುಡಿ, ಮುತ್ತು, ಕೊಟ್ರೇಶ, ಸುರೇಶ, ರಣದಪ್ಪ, ಮಲ್ಲಮ್ಮ, ಸಾರೆಪ್ಪ, ಹನುಮಂತ, ದೇವಪ್ಪ, ಬಸನಗೌಡ, ಗಂಗಮಾಳವ್ವ, ಬಸಪ್ಪ, ಮಾಹಾದೇವಿ, ಈರಮ್ಮ, ಬಸವರಾಜ, ಲಲಿತಾ ಇದ್ದರು.