

ಹೆಬ್ರಿ: ಊರಿನ ಜನರು ಸಹಕಾರ ನೀಡುವುದರ ಮೂಲಕ ಕ್ರೀಡಾಕೂಟ ಯಶಸ್ವಿಗೊಳಿಸಬೇಕು ಎಂದು ಎಸ್‌ಡಿಎಂಸಿ ಅಧ್ಯಕ್ಷ ಹರ್ಷ ಶೆಟ್ಟಿ ಹೇಳಿದರು.
ಹೆರ್ಗ ವಿಠಲಶೆಟ್ಟಿ ಪ್ರೌಢಶಾಲೆ ಕುಚ್ಚೂರಿನಲ್ಲಿ ಪ್ರೌಢಶಾಲಾ ವಿಭಾಗದ ಕಾರ್ಕಳ ತಾಲೂಕುಮಟ್ಟದ ಕ್ರೀಡಾಕೂಟ ಅ.24 ಹಾಗೂ 25ರಂದು ನಡೆಯಲಿರುವುದರಿಂದ ಶಾಲೆಯಲ್ಲಿ ಇತ್ತೀಚೆಗೆ ನಡೆದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಕಳ ತಾಲೂಕು ದೈಹಿಕ ಶಿಕ್ಷಣ ಪರೀಕ್ಷಾಧಿಕಾರಿ ರವಿಚಂದ್ರ ಕಾರಂತ್ ಮಾತನಾಡಿ, ವಿವಿಧ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಎರಡು ದಿನದಲ್ಲಿ ಸುಮಾರು 3000 ಜನ ಪಾಲ್ಗೊಳ್ಳುತ್ತಾರೆ ಎಲ್ಲ ರೀತಿಯ ತಯಾರಿಗಳು ಆಗಬೇಕು ಎಂದರು. ಮುಖ್ಯಶಿಕ್ಷಕಿ ತುಳಸಿ, ಎಸ್‌ಡಿಎಂಸಿ ಸದಸ್ಯರು, ಶಿಕ್ಷಕರಿದ್ದರು.