

ಹೆಬ್ರಿ: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಹೆಬ್ರಿ ತಾಲೂಕು ಘಟಕದ ವತಿಯಿಂದ ಹಿರಿಯರೆಡೆಗೆ ಸಾಹಿತ್ಯದ ನಡಿಗೆ ಕಾರ್ಯಕ್ರಮ ಅನ್ವಯ ನಿವೃತ್ತ ಮುಖ್ಯಶಿಕ್ಷಕ ಪಿ. ವಾಸುದೇವ ಕ್ರಮಧಾರಿ ದಂಪತಿಯನ್ನು ಅವರ ಸ್ವಗೃಹದಲ್ಲಿ ಸೋಮವಾರ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ವಾಸುದೇವ ಕ್ರಮಧಾರಿ ಶುಭಹಾರೈಸಿದರು. ರಾಧಾಕೃಷ್ಣ ಕ್ರಮಧಾರಿ, ಶಿಕ್ಷಕ ಸದಾಶಿವ ಬಾಯಾರಿ ಮಾತನಾಡಿದರು. ಕಸಾಪ ಹೆಬ್ರಿ ಘಟಕಾಧ್ಯಕ್ಷ ಮುದ್ದೂರು ಶ್ರೀನಿವಾಸ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು.
ಬಾಲಚಂದ್ರ ಮುದ್ರಾಡಿ, ಕಸಾಪ ಸದಸ್ಯರು, ಕ್ರಮಧಾರಿ ಮನೆಯವರು ಇದ್ದರು. ಪುಷ್ಪಾವತಿ ಪ್ರಾರ್ಥಿಸಿದರು. ಡಾ. ಪ್ರವೀಣ್ ಕುಮಾರ್ ಪ್ರಸ್ತಾವನೆಗೈದರು. ಮಂಜುನಾಥ ಶಿವಪುರ ಸ್ವಾಗತಿಸಿದರು. ವೀಣಾ ಆರ್. ಭಟ್ ಸನ್ಮಾನ ಪತ್ರ ವಾಚಿಸಿದರು. ನವೀನ್ ಶೆಟ್ಟಿ ಮಡಾಮಕ್ಕಿ ಕಾರ್ಯಕ್ರಮ ನಿರೂಪಿಸಿದರು.