13 ರಿಂದ ಕ್ರೀಡಾಶಾಲೆಗೆ ಆಯ್ಕೆ ಟ್ರಯಲ್ಸ್​

Sports
Published on

ತುಮಕೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನಡೆಸುತ್ತಿರುವ ಕ್ರೀಡಾ ಶಾಲೆ/ಕ್ರೀಡಾ ನಿಲಯಗಳಿಗೆ ಪ್ರತಿಭಾವಂತ ಕ್ರೀಡಾಪಟುಗಳನ್ನು ಆಯ್ಕೆ ಮಾಡಲು ಜ.13 ರಿಂದ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಆಯ್ಕೆ ಪ್ರಕ್ರಿಯೆಯು ಜಿಲ್ಲೆಯ ಆಯಾ ತಾಲೂಕು ಕೇಂದ್ರಗಳಲ್ಲಿ ನಿಗಧಿತ ದಿನಾಂಕದಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆಯಲಿದ್ದು, ಜ.13ರಂದು ಕುಣಿಗಲ್​ ತಾಲ್ಲೂಕು ಕ್ರೀಡಾಂಗಣ, ಜ.15ರಂದು ಮಧುಗಿರಿ ರಾಜೀವ್​ಗಾಂಧಿ ಕ್ರೀಡಾಂಗಣ, ಜ.16ರಂದು ಪಾವಗಡ ತಾಲೂಕು ಕ್ರೀಡಾಂಗಣ, ಜ.17ರಂದು ಶಿರಾ ತಾಲೂಕು ವಿವೇಕಾನಂದ ಕ್ರೀಡಾಂಗಣ, ಜ.18ರಂದು ಕೊರಟಗೆರೆ ತಾಲೂಕು ಕ್ರೀಡಾಂಗಣ, ಜ.20ರಂದು ಚಿಕ್ಕನಾಯನಹಳ್ಳಿ ತಾಲೂಕು ಕ್ರೀಡಾಂಗಣ, ಜ.21ರಂದು ತಿಪಟೂರು ತಾಲೂಕು ಕಲ್ಪತರು ಕ್ರೀಡಾಂಗಣ, ಜ.27ರಂದು ಗುಬ್ಬಿ ಸರ್ಕಾರಿ ಪ್ರೌಢಶಾಲೆ ಮೈದಾನ, ಜ.28ರಂದು ತುರುವೇಕೆರೆ ತಾಲೂಕು ಕ್ರೀಡಾಂಗಣ, ಜ.29ರಂದು ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೋಹಿತ್​ ಗಂಗಾಧರ್​ ತಿಳಿಸಿದ್ದಾರೆ.

ತಾಲೂಕು ಮಟ್ಟದಲ್ಲಿ ಆಯ್ಕೆಯಾದ 7 ಮತ್ತು 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕ/ಬಾಲಕಿಯರು ಜ.29ರಂದು ಹಾಗೂ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕ/ಬಾಲಕಿಯರು ೆ.22ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ತುಮಕೂರು ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net