ನಿರಂತರ ಅಭ್ಯಾಸದಿಂದ ಸಾಧನೆ ಸಾಧ್ಯ : ಸಹನಾ ಕುಮಾರಿ ಹೇಳಿಕೆ

New Project (37)
Published on

ಬಂಟ್ವಾಳ: ದೀಪಿಕಾ ಪ್ರೌಢಶಾಲೆಗೆ 60 ವರ್ಷ ತುಂಬಿರುವುದು ಹೆಮ್ಮೆಯ ವಿಷಯ. ಯಾವ ಕ್ಷೇತ್ರದಲ್ಲಿಯೂ ನಿರಂತರ ಅಭ್ಯಾಸ ಮಾಡಿದರೆ ಸಾಧನೆ ಮಾಡಲು ಸಾಧ್ಯ ಎಂದು ಒಲಿಂಪಿಕ್ ಆಟಗಾರ್ತಿ ಸಹನಾ ಕುಮಾರಿ ನಾಗರಾಜ್ ಜಿ. ತಿಳಿಸಿದರು.

ಮೊಡಂಕಾಪು ದೀಪಿಕಾ ಪ್ರೌಢಶಾಲೆ ವಜ್ರಮಹೋತ್ಸವ ಪ್ರಯುಕ್ತ ಹಿರಿಯ-ಕಿರಿಯ ವಿದ್ಯಾರ್ಥಿಗಳ ಕ್ರೀಡಾಕೂಟದ ಕ್ರೀಡಾಜ್ಯೋತಿ ಸ್ವೀಕರಿಸಿ ಮಾತನಾಡಿದರು.

ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪುರುಷೋತ್ತಮ ಪೂಜಾರಿ ಧ್ವಜಾರೋಹಣಗೈದರು. ವಜ್ರಮಹೋತ್ಸವ ಕ್ರೀಡಾ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಮಾತನಾಡಿದರು. ಬಿ.ಸಿ.ರೋಡಿನ ಲಯನ್ಸ್ ಕ್ಲಬ್‌ನಲ್ಲಿ ಕ್ರೀಡಾ ಜ್ಯೋತಿಗೆ ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ ಸುಪ್ರಿತ್ ಆಳ್ವ ಚಾಲನೆ ನೀಡಿದರು. ಶಾಲಾ ಸಂಚಾಲಕ ಫಾ.ವಲೇರಿಯನ್ ಡಿಸೋಜ ಸಮಾರಂಭ ಉದ್ಘಾಟಿಸಿದರು.

ದಿವಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸದಾಶಿವ ಡಿ.ತುಂಬೆ ಪ್ರತಿಜ್ಞಾವಿಧಿ ಬೋಧಿಸಿದರು. ವಜ್ರಮಹೋತ್ಸವ ಸಮಿತಿ ಅಧ್ಯಕ್ಷ ರಾಕೇಶ್ ಮಲ್ಲಿ, ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ರಾಜೇಶ್ ಸಾಲ್ಯಾನ್, ಮುಖ್ಯಶಿಕ್ಷಕ ಸಾಧು, ಶಾಲಾ ಟ್ರಸ್ಟಿ ಅಶ್ವನಿ ಕುಮಾರ್ ರೈ, ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ರತನ್ ಶೆಟ್ಟಿ ಉಪಸ್ಥಿತರಿದ್ದರು.

ವಜ್ರಮಹೋತ್ಸವ ಸಮಿತಿ ಕಾರ್ಯದರ್ಶಿ ರೋಶನ್ ಡಿಸೋಜ, ಶಿವಪ್ರಸಾದ್ ಪ್ರಭು, ಟ್ರಸ್ಟಿ ಮಹಮ್ಮದ್ ವಳವೂರು, ಜೈಸನ್ ಮೊಂತೆರೋ, ಗೋವರ್ಧನ್ ರಾವ್, ಸತೀಶ್ ಭಂಡಾರಿ, ಸತೀಶ್ ಪಲ್ಲಮಜಲು, ರೊನಾಲ್ಡ್ ಫರ್ನಾಂಡಿಸ್, ಕ್ರೀಡಾ ಸಮಿತಿ ಅಧ್ಯಕ್ಷ ದಿವಾಕರ ಶೆಟ್ಟಿ, ಮಹಮ್ಮದ್ ಹನೀಫ್, ರಾಮಕೃಷ್ಣ ಆಳ್ವ, ಶಿಕ್ಷಕಿ ಶಾಲಿನಿ, ಸತೀಶ್ ಶೆಟ್ಟಿ ಮೊಡಂಕಾಪು, ಹರೀಶ್ ಸಾಲ್ಯಾನ್, ರೋನಿ ಬಂಟ್ವಾಳ ಸಹಕರಿಸಿದರು. ಸುನೀಲ್ ಲೂವಿಸ್ ಮತ್ತು ಶಿಕ್ಷಕ ತಿಪ್ಪೇಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net