ಬೆಳಾಲು ದೇವಳ ವಠಾರದಲ್ಲಿ ಕ್ರೀಡಾಕೂಟ

New Project (19)
Published on

ಬೆಳ್ತಂಗಡಿ: ಮಾಯ ಶ್ರೀ ಮಾಯ ಮಹೇಶ್ವರ ಭಜನಾ ಮಂಡಳಿ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ 43ನೇ ವರ್ಷದ ಕ್ರೀಡಾಕೂಟ ಮಾಯಮಹಾದೇವ ದೇವಸ್ಥಾನ ವಠಾರದಲ್ಲಿ ನಡೆಯಿತು. ದೇವಸ್ಥಾನ ಅರ್ಚಕ ಕೇಶವ ರಾಮಯಾಜಿ ಉದ್ಘಾಟಿಸಿದರು.

ಬೆಳಾಲು ಗ್ರಾಪಂ ಅಧ್ಯಕ್ಷೆ ವಿದ್ಯಾಶ್ರೀನಿವಾಸ ಗೌಡ, ಸದಸ್ಯ ಸತೀಶ್ ಗೌಡ ಎಳ್ಳುಗದ್ದೆ, ಕೃಷ್ಣಯ್ಯ ಆಚಾರ್ಯ, ಮಾಯ ಫ್ರೆಂಡ್ಸ್ ಅಧ್ಯಕ್ಷ ರಾಧಾಕೃಷ್ಣ, ಬೆಳ್ತಂಗಡಿ ವಾಣಿ ಪ.ಪೂ ಕಾಲೇಜು ಉಪನ್ಯಾಸಕ ದಿನೇಶ್ ಗೌಡ ಉರೆಜ್ಜ, ಎಸ್‌ಕೆಡಿಆರ್‌ಪಿ ಉಜಿರೆ ವಲಯ ಮೇಲ್ವಿಚಾರಕಿ ಪೂರ್ಣಿಮಾ, ಬೆಳಾಲು ಶ್ರೀ ಧ.ಮ.ಪ್ರೌಢಶಾಲೆ ಮುಖ್ಯ ಶಿಕ್ಷಕ ಜಯರಾಮ ಮಯ್ಯ, ಮಾಯ ಸ. ಉ.ಪ್ರಾ ಶಾಲಾ ಸಹಶಿಕ್ಷಕಿ ಜ್ಯೋತಿ ಎಂ.ಎಸ್., ಅನಂತೋಡಿ ಶ್ರೀ ಅನಂತೇಶ್ವರ ಭಜನಾ ಮಂಡಳಿ ಅಧ್ಯಕ್ಷ ಹರೀಶ್ ಪೋಸೊಟ್ಟು, ಮಾಯ ಮಹೇಶ್ವರ ಭಜನಾ ಮಂಡಳಿ ಗೌರವಾಧ್ಯಕ್ಷ ಕೃಷ್ಣಪ್ಪ ಗೌಡ ಬೆರ್ಕೆಜಾಲು ಉಪಸ್ಥಿತರಿದ್ದರು.

ಭಜನಾ ಮಂಡಳಿ ಕಾರ್ಯದರ್ಶಿ ಶಿವಪ್ರಸಾದ್ ಸ್ವಾಗತಿಸಿದರು. ಗೋಪಾಲ ಗೌಡ ಉರೆಜ್ಜ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಆಟೋಟ ಸ್ಪರ್ಧೆ ನಡೆಯಿತು. ಸಂಜೆ ಸಮಾರೋಪ ಸಮಾರಂಭದಲ್ಲಿ ಭಜನಾ ಮಂಡಳಿ ಅಧ್ಯಕ್ಷ ಹರೀಶ್ ಆಚಾರ್ಯ ಕುದ್ರಾಲು ಅಧ್ಯಕ್ಷತೆ ವಹಿಸಿದ್ದರು. ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ, ಮಾಯ ಮಹಾದೇವ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಚ್. ಪದ್ಮಗೌಡ, ಗ್ರಾಪಂ ಸದಸ್ಯರಾದ ಸುರೇಂದ್ರ ಗೌಡ ಸುರುಳಿ, ಪ್ರೇಮಾ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಯ ಒಕ್ಕೂಟ ಅಧ್ಯಕ್ಷ ಗಂಗಾಧರ ಸಾಲಿಯಾನ್, ಮಾಯ ವರಮಹಾಲಕ್ಷ್ಮೀ ಪೂಜಾ ಸಮಿತಿ ಅಧ್ಯಕ್ಷೆ ಸುಲೋಚನಾ ಉಪಸ್ಥಿತರಿದ್ದರು. ಭಜನಾ ಮಂಡಳಿ ಕೋಶಾಧಿಕಾರಿ ಗಣೇಶ್ ಕನಿಕ್ಕಿಲ, ಭಜನಾ ಸಂಚಾಲಕಿ ಭವಾನಿ ಮಾರ್ಪಲು, ಮಹಿಳಾ ಸಂಚಾಲಕಿ ಸುಜಾತಾ ಮಂಜುಶ್ರೀ, ಕ್ರೀಡಾ ಸಂಚಾಲಕ ಶಿಲ್ಪಿ ಶಶಿಧರ ಆಚಾರ್ಯ, ಸಹಸಂಚಾಲಕ ರಂಜನ್ ಹೊಸಮನೆ ಸಹಕರಿಸಿದರು. ಭಜನಾ ಮಂಡಳಿ ಕಾರ್ಯದರ್ಶಿ ಶಿವಪ್ರಸಾದ್ ಕಪ್ಪೆಹಳ್ಳ ಸ್ವಾಗತಿಸಿದರು. ಶಿಕ್ಷಕ ಮಹೇಶ್ ಪುಳಿತ್ತಡಿ ಕಾರ್ಯಕ್ರಮ ನಿರೂಪಿಸಿದರು. ಕವನ ಹಿಮರಡ್ಡ ವಂದಿಸಿದರು.

ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ

ವಿವಿಧ ಕ್ಷೇತ್ರದ ಸಾಧಕರಾದ ಶಿವಕುಮಾರ್ ಬಾರಿತ್ತಾಯ ಪಾರಾಳ, ಮಾಯ ಫೆಂಡ್ಸ್ ಅಧ್ಯಕ್ಷ ರಾಧಾಕೃಷ್ಣ, ಪತ್ರಕರ್ತ ಜಾರಪ್ಪ ಪೂಜಾರಿ ಬೆಳಾಲು, ಶೈಕ್ಷಣಿಕ ಸಾಧಕಿ ಇಂದುಮತಿ ಮಾರ್ಪಲು, ಸುಜ್ಞಾನ್ಯ ಅವರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ 2024-25ನೇ ಸಾಲಿನಲ್ಲಿ ಸಾಧನೆಗೈದ ಮನಸ್ವಿನಿ, ಸಮೀಕ್ಷಾ, ಚೇತನ್ ಎಸ್., ಲಿಖಿತಾ, ಇಂದುಮತಿ, ವೈಷ್ಣವಿ, ಚೈತ್ರಾ ಪೂರ್ಣಿಮಾ ಅವರನ್ನು ಗೌರವಿಸಲಾಯಿತು. ತೀರ್ಪುಗಾರರಾದ ಧರ್ಮೇಂದ್ರ ಕುಮಾರ್, ರವಿಚಂದ್ರ ಜೈನ್, ಶಶಿಧರ ಒಡಿಪ್ರೊಟ್ಟು, ಮೋಹನ ಗೌಡ ಪಿ.ಮಾಚಾರು, ಸಹಕರಿಸಿದ ದೇವಸ್ಥಾನ ವ್ಯವಸ್ಥಾಪಕ ಶೇಖರ ಗೌಡ ಕೊಲ್ಲಿಮಾರು ಅವರನ್ನು ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net