ಕಾರ್ತಿಕ ದೀಪೋತ್ಸವಕ್ಕೆ ಚಾಲನೆ

New Project (10)
Published on

ಬಂಟ್ವಾಳ: ಸಜೀಪ ಮಾಗಣೆಯ ಬಿಲ್ಲಪದವು ಕಾಳಾದ್ರಿ ಸಾನ್ನಿಧ್ಯದಲ್ಲಿ ನಡೆಯುವ ಕಾರ್ತಿಕ ದೀಪೋತ್ಸವ ಅಂಗವಾಗಿ ಸಾಮೂಹಿಕ ದೀಪಾರಾಧನೆಗೆ ಸಜೀಪ ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್ ಚಾಲನೆ ನೀಡಿದರು.

ಸಜೀಪ ನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್, ಸಜೀಪ ಮುನ್ನೂರು ಮುಗುಳಿಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯ ಶಂಕರ ಬಾಸ್ರಿತ್ತಾಯ, ಪ್ರಗತಿಪರ ಕೃಷಿಕ ನಗ್ರಿ ಶ್ರೀನಿವಾಸ್ ಭಟ್, ಶಿಕ್ಷಕ ಜಿ.ರಾಮಕೃಷ್ಣ ಭಟ್, ಸಜೀಪ ಮಾಗಣೆ ಕಾಂತಾಡಿ ಗುತ್ತು ಗಡಿ ಪ್ರಧಾನರಾದ ಗಣೇಶ ಶೆಟ್ಟಿ ಯಾನೆ ಉಗ್ಗ ಶೆಟ್ಟಿ, ಸಜೀಪ ಗುತ್ತು ಗಡಿ ಪ್ರಧಾನರಾದ ಮುತ್ತಣ್ಣ ಶೆಟ್ಟಿ ಯಾನೆ ಕಾಳಪ್ಪ ಶೆಟ್ಟಿ, ಶಿವರಾಮ ಭಂಡಾರಿ ಬಿಜಂದಾಡಿ ಗುತ್ತು, ಕೆ.ರಾಧಾಕೃಷ್ಣ ಆಳ್ವ, ಪ್ರವೀಣ್ ಆಳ್ವ, ಕಿಶನ್ ಶೇಣವ, ಸುಧಾಕರ ಕೆ.ಟಿ. ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net