

ಕೋಟ: ಹಂಗಾರಕಟ್ಟೆ ಚೇತನಾ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ರಾಷ್ಟ್ರೀಯ ಕ್ರೀಡಾ ದಿನ ಆಚರಿಸಲಾಯಿತು. ವಿದ್ಯಾರ್ಥಿಗಳು ಕ್ರೀಡಾಪ್ರತಿಜ್ಞೆ ಸ್ವೀಕರಿಸಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಹರ್ಷವರ್ಧನ ಶೆಟ್ಟಿ ಅವರು ಹಾಕಿ ವಾಂತ್ರಿಕ ಧ್ಯಾನ್‌ಚಂದ್ ಕುರಿತು ಹಾಗೂ ಕ್ರೀಡಾ ದಿನಾಚರಣೆಯ ಮಹತ್ವ ವಿವರಿಸಿದರು.
ಮುಖ್ಯಶಿಕ್ಷಕಿ ಕಲ್ಪನಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹಂಗಾರಕಟ್ಟೆ ರೋಟರಿ ಕ್ಲಬ್ ಅಧ್ಯಕ್ಷೆ ಜ್ಯೋತಿ ಉದಯ್ ಕುವಾರ್, ಪದಾಧಿಕಾರಿಗಳಾದ ಮುರಳಿಧರ್ ನಾಯಿರಿ, ಸುಲತಾ ಹೆಗ್ಡೆ, ಲೀಲಾವತಿ ಗಂಗಾಧರ್, ವೆಂಕಟೇಶ್ ಭಟ್, ಡಾ.ರಶ್ಮಿ ಮುರಳಿಧರ್ ನಾಯರಿ, ಅಮಿತಾ ಉಮೇಶ್, ಇಂಟರಾಕ್ಟ್ ಕ್ಲಬ್ ಅಧ್ಯಕ್ಷೆ ವನಿಶಾ, ಶ್ರಾವ್ಯ ಉಪಸ್ಥಿತರಿದ್ದರು. ಸುಪ್ರಭಾ ಕಾರ್ಯಕ್ರಮ ನಿರೂಪಿಸಿದರು.