ವೀರಮಂಗಲ ಪಿಎಂಶ್ರೀ ಶಾಲೆಯಲ್ಲಿ ಕ್ರೀಡಾ ಸಡಗರ

Ism_Sports day
Published on

ಪುತ್ತೂರು ಗ್ರಾಮಾಂತರ: ವೀರಮಂಗಲ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ರೀಡಾ ಸಡಗರ ನಡೆಯಿತು. ಎಸ್‌ಡಿಎಂಸಿ ಅಧ್ಯಕ್ಷೆ ಅನುಪಮ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯಶಿಕ್ಷಕ ತಾರಾನಾಥ ಸವಣೂರು ಕ್ರೀಡಾ ಪಥಸಂಚಲನದ ವಂದನೆ ಸ್ವೀಕರಿಸಿದರು. ಶಾಲಾ ಮಕ್ಕಳಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆಗಳು ನಡೆದವು.

ಶಿಕ್ಷಕಿಯರಾದ ಹರಿಣಾಕ್ಷಿ, ಶೋಭಾ,ಕವಿತಾ, ಶಿಲ್ಪರಾಣಿ, ಸೌಮ್ಯ, ಯೋಗಶಿಕ್ಷಕಿ ಮಧುಶ್ರೀ, ಕೇರಿಯರ್ ಕೌನ್ಸಿಲಿಂಗ್ ಶಿಕ್ಷಕಿ ಸುಮಿತ್ರಾ, ಎಲ್‌ಕೆಜಿಯ ಸವಿತಾ, ಸಂಚನಾ, ಚಂದ್ರಾವತಿ, ಭವ್ಯ ಅಡುಗೆ ಸಿಬ್ಬಂದಿ ಪಾರ್ವತಿ, ಸುಶೀಲಾ, ಪ್ರೇಮಾ, ಶಾಲಾ ಎಸ್‌ಡಿಎಂಸಿ ಸದಸ್ಯರಾದ ರಝಾಕ್, ಪದ್ಮಾವತಿ, ರತ್ನಾವತಿ, ಚಿತ್ರಾ, ದಿನೇಶ್ ಶೆಟ್ಟಿ, ಪಾಲಕರಾದ ಸೆಲಿಂ, ಫಾರೂಕ್, ಹರೀಶ ಮಣ್ಣಗುಂಡಿ, ಹಳೇ ವಿದ್ಯಾರ್ಥಿ ಸಂಘದ ಗೋಪಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಹೇಮಾವತಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net