ಬೆಳಕಿಗೆ ಬರಲಿ ಗ್ರಾಮೀಣ ಮಹಿಳಾ ಪ್ರತಿಭೆ

Kdb_Puttila
Published on

ಕಡಬ: ಯುವಕ ಸಂಘಟನೆಗಳು ಅಯೋಜಿಸುವ ಕಾರ್ಯಕ್ರಮಗಳಿಗೆ ಪ್ರತಿಹಂತದಲ್ಲೂ ಹಿರಿಯರು ಪ್ರೋತ್ಸಾಹ ನೀಡಿ ಯಶಸ್ವಿ ಮಾಡುವುದರ ಮೂಲಕ ಸಂಘಟನೆಗೆ ಬಲ ನೀಡಬೇಕು. ಮುಂದಿನ ವರ್ಷ ಮಹಿಳೆಯರ ವಿಭಾಗದಲ್ಲೂ ಪಂದ್ಯಾಟ ಅಯೋಜಿಸುವ ಕಾರ್ಯ ಮಾಡಬೇಕು. ಆ ಮೂಲಕ ಗ್ರಾಮೀಣ ಮಹಿಳಾ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಬೇಕು ಎಂದು ಶಾಸಕಿ ಭಾಗಿರಥಿ ಮುರುಳ್ಯ ಹೇಳಿದರು.

ಕೊಲ ಗ್ರಾಮದ ಏಣಿತ್ತಡ್ಕ ಶಿವಾಜಿ ಗೆಳೆಯರ ಬಳಗದ ವತಿಯಿಂದ ಶನಿವಾರ ಏಣಿತ್ತಡ್ಕ ರಾಜನ್ ಕ್ರೀಡಾಂಗಣದಲ್ಲಿ 550 ಕೆ.ಜಿ ವಿಭಾಗದ 8 ಜನರ ತಂಡದಲ್ಲಿ ಹಿಂದುಗಳಿಗಾಗಿ ಅಯೋಜಿಸಿದ್ದ ಪುರುಷರ ಹಗ್ಗ ಜಗ್ಗಾಟ ಪಂದ್ಯಾಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲಪಂದ್ಯಾಟ ಉದ್ಘಾಟಿಸಿದರು. ಕೊಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪ ಸುಭಾಶ್ ಕುಮಾರ್ ಶುಭ ಹಾರೈಸಿದರು. ಪ್ರಮುಖರಾದ ಸುಬ್ರಹ್ಮಣ್ಯ ಭಟ್ ಕೊರಂತಾಜೆ, ಚಂದ್ರಶೇಖರ ಭಟ್ ಕೊರಂತಾಜೆ, ಶಿವಾಜಿ ಗೆಳೆಯರ ಬಳಗದ ಹರ್ಷಿತ್ ಉಪಸ್ಥಿತರಿದ್ದರು.

ಸುರೇಶ್ ಪಡಿಪಾಂಡ, ದೀಪಕ್ ನೆಲ್ಯಾಡಿ ಪಂದ್ಯಾಟ ನಿರ್ವಹಿಸಿದರು. ಅಶೋಕ್ ಕೊಲ, ವಿಶ್ವನಾಥ ರಾಮಕುಂಜ ನಿರ್ಣಯಕರಾಗಿದ್ದರು. ಆಲಂಕಾರು ಸಿಎ ಬ್ಯಾಂಕ್ ನಿರ್ದೇಶಕ ರಾಮಚಂದ್ರ ನಾಯ್ಕ ಏಣಿತ್ತಡ್ಕ ಸ್ವಾಗತಿಸಿದರು. ಶಿವಾಜಿ ಗೆಳೆಯರ ಬಳಗದ ಅಧ್ಯಕ್ಷ ಪವನ್ ಕುಮಾರ್ ವಂದಿಸಿದರು.ಹರಿಪ್ರಸಾದ್ ಕಕ್ವೆ ನಿರೂಪಿಸಿದರು.

ಬಹುಸಂಖ್ಯಾತ ಹಿಂದು ಸಮಾಜಕ್ಕೆ ನಿರಂತರ ಹಲವಾರು ಸವಾಲುಗಳು ಎದುರಾಗುತ್ತಿವೆ. ಇದನೆಲ್ಲ ಮೆಟ್ಟಿ ನಿಲ್ಲುವ ತಾಕತ್ತು ಯುವ ಸಮೂಹಕ್ಕಿದೆ. ಯುವಕರು ಸಂಘಟಿತರಾಗಿ ಹಿಂದು ಪರ ಚಿಂತನೆಯ ಕಾರ್ಯಕ್ರಮ ಅಯೋಜಿಸುವ ಮೂಲಕ ಹಿಂದು ಸಮಾಜದ ಬಲವರ್ದನೆ ಮಾಡಬೇಕು.

- ಅರಣ್ ಪುತ್ತಿಲ, ಹಿಂದು ಮುಖಂಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net