

ಕುಂದಾಪುರ: ತಲ್ಲೂರು ಸಂತ ಫ್ರಾನ್ಸಿಸ್ ಆಸ್ಸಿಸಿ ದೇವಾಲಯದಲ್ಲಿ ಕೈಸ್ತ ಶಿಕ್ಷಣ ಆಯೋಗದ ನೇತೃತ್ವದಲ್ಲಿ ಚರ್ಚ್‌ನ ಮಕ್ಕಳಿಗೆ ನಾಲ್ಕು ದಿನಗಳ ಬೇಸಿಗೆ ರಜೆಯ ಆಧ್ಯಾತ್ಮಿಕ ತರಬೇತಿ ಶಿಬಿರ ನಡೆಯಿತು.
ಚರ್ಚ್‌ನ ಧರ್ಮಗುರು ಎಡ್ವಿನ್ ಡಿಸೋಜ ಬಲಿಪೂಜೆಯೊಂದಿಗೆ ಶಿಬಿರಕ್ಕೆ ಚಾಲನೆ ನೀಡಿದರು. ಮೊದಲನೆಯ ದಿನ ಸುರತ್ಕಲ್ ಸೇಕ್ರೆಡ್ ಹಾರ್ಟ್ ಚರ್ಚ್‌ನ ಸಹಾಯಕ ಧರ್ಮಗುರು ರಿಚರ್ಡ್ ಡಿಸೋಜ, ಬೈಬಲ್ ಆಧಾರಿತ ಕೆಲವು ಗುಂಪು ಚಟುವಟಿಕೆಗಳಲ್ಲಿ, ಏಕಪಾತ್ರ ಅಭಿನಯ, ರಸಪ್ರಶ್ನೆಯನ್ನು ನಡೆಸಿದರು. ಎರಡನೆಯ ದಿನ ಉಡುಪಿ ಧರ್ಮ ಪ್ರಾಂತ್ಯದ ಧರ್ಮ ಸಭೆ ಮೂಲ ಸಮುದಾಯ ಆಯೋಗದ ನಿರ್ದೇಶಕ ಹೆರಾಲ್ಡ್ ಪಿರೇರಾ ಧರ್ಮ ಸಭೆಯ ಮೂಲ ಸಮುದಾಯದ ಬಗ್ಗೆ ಮಾಹಿತಿ, ತರಬೇತಿ ನೀಡಿದರು. ಮೂರನೆಯ ದಿನ ಚರ್ಚ್‌ನ ಧರ್ಮಗುರು ಎಡ್ವಿನ್ ಡಿಸೋಜ ಮಕ್ಕಳು ತಮ್ಮ ಮನೆ, ಶಾಲೆ ಹಾಗೂ ಸಮಾಜದಲ್ಲಿ ಎದುರಿಸುವ ಸಮಸ್ಯೆ, ಪರಿಹಾರೋಪಾಯಗಳ ಬಗ್ಗೆ ಮಾಹಿತಿ ನೀಡಿದರು. ನಾಲ್ಕನೇ ದಿನ ಬಾಲ ಯೇಸುವಿನ ಪುಣ್ಯಕ್ಷೇತ್ರ ಬಿಕರ್ನಕಟ್ಟೆ, ಮುಡಿಪು ಸಂತ ಜೋಸೆಫ್ ವಾಜ್ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡುವುದರ ಮೂಲಕ ಶಿಬಿರವನ್ನು ಮುಕ್ತಾಯಗೊಳಿಸಲಾಯಿತು.
ಚರ್ಚ್‌ನ ಧರ್ಮಗುರುಗಳೊಂದಿಗೆ, ಭಾನುವಾರದಂದು ಕೈಸ್ತ ಶಿಕ್ಷಣ ಬೋಧಿಸುವ ಶಿಕ್ಷಕರು ಸಹಕರಿಸಿದರು.