ಭಾಷಣ ಕಲೆ ತರಬೇತಿ

jci
Published on

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ, ರಾಷ್ಟ್ರೀಯ ಸೇವಾ ಯೋಜನಾ ಘಟಕ, ಜೆಸಿಐ ಪಂಜ ಪಂಚಶ್ರೀ ವತಿಯಿಂದ ಮಂಗಳವಾರ ಪರಿಣಾಮಕಾರಿ ಭಾಷಣ ಕಲೆ ತರಬೇತಿ ಕಾರ್ಯಗಾರ ನಡೆಯಿತು.

ಪಂಜ ಜೇಸಿಸ್ ಅಧ್ಯಕ್ಷ ಜೀವನ್ ಮಲ್ಕಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತರಬೇತುದಾರರಾಗಿ ಜೇಸಿಸ್ ವಲಯ ತರಬೇತುದಾರರಾದ ಸವಿತಾರ ಮೂಡೂರು, ಸೋಮಶೇಖರ್ ನೇರಳ ವಿದ್ಯಾರ್ಥಿಗಳಿಗೆ ಭಾಷಣ ಕಲೆ ಬಗ್ಗೆ ಮಾಹಿತಿ ನೀಡಿದರು. ಪ್ರಾತ್ಯಕ್ಷಿಕೆ ಮೂಲಕ ಪರಿಣಾಮಕಾರಿ ಭಾಷಣ ಕಲೆಯ ಕುರಿತು ಸವಿವರವಾಗಿ ತಿಳಿಸಿದರು.

ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ದಿನೇಶ ಪಿ.ಟಿ, ಐಕ್ಯೂಎಸಿ ಸಂಯೋಜಕಿ ಲತಾ ಬಿ ಟಿ, ಜೇಸಿಸ್ ಪೂರ್ವಾಧ್ಯಕ್ಷರಾದ ಅಶ್ವತ್ ಬಾಬ್ಲುಬೆಟ್ಟು, ನಾಗಮಣಿ ಕೆದಿಲ ಪಂಜ, ಕಾರ್ಯದರ್ಶಿ ಜೀವನ್ ಶೆಟ್ಟಿಗದ್ದೆ ಉಪಸ್ಥಿತರಿದ್ದರು. ಭರತ್ ನೆಕ್ರಾಜೆ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net