ಕಥಕ್ ನೃತ್ಯಕ್ಕೆ ಮನಸೋತ ಪ್ರೇಕ್ಷಕ

21 lxr 2- pulegere
Published on

ಲಕ್ಷ್ಮೇಶ್ವರ: ಪುಲಿಗೆರೆ ಉತ್ಸವದಲ್ಲಿ ಶನಿವಾರ ಸಂಜೆಯ ಕಾರ್ಯಕ್ರಮದಲ್ಲಿ ಬೆಂಗಳೂರಿನ ನಂದಿನಿ ನಾದಂ ಟೀಂ ಕಥಕ್ ನೃತ್ಯ ಪ್ರದರ್ಶನ ಕಥಕ್ ಕಿ ಕಾನಾಕ್ ನೃತ್ಯ ರೂಪಕಗಳು ಮನಮೋಹಕವಾಗಿದ್ದವು.


ಮಹಾಗಣಪತಿಂ ಮನಸಾ ಸ್ವರಾಮಿಯಿಂದ ಪ್ರದರ್ಶನ ಆರಂಭಿಸಿದ ತಂಡ ಧಮಾರಾ ತಾಳದಲ್ಲಿ ಶಿವಸ್ತುತಿ ಪಶುಪತಿ ಗಿರಿಜಾ ಪತಹರ, ಶಿವಸ್ತುತಿ ಶಿವ ಭಜನ, ಮೀರಾ ಭಜನ ಗಿರಿಧರ್ ಕೇಘರ ಜಾವ ಪ್ರಸ್ತುತಿ ಮತ್ತು ತರಾನ್ ರಾಗ ಕಿರವಾಣಿ ತಾಳ ತಿನ ತಾಳದಲ್ಲಿ ನೀಡಿದ ರೂಪಕಗಳ ಪ್ರದರ್ಶನ ಎಲ್ಲರ ಮನಸೆಳೆದವು.


ತಂಡದ ಮುಖ್ಯಸ್ಥೆ ನಂದಿನಿ ಮೆಹ್ತಾ ಅವರ ಜತೆ ಯುವ ಕಲಾವಿದೆಯರಾದ ಪಾವನಿ ಕಲ್ವಕಲ್ವ, ವಿಭಾ ಭಟ್, ಸುದಿಪ್ತಾ ಜಿ., ಚಂದನಾ ರಾಜು, ವೈಭವಿ ಶುಕ್ಲಾ ಸೋಮೇಶ್ವರನ ಸನ್ನಿಧಿಯಲ್ಲಿ ಪ್ರತಿಭೆ ಪ್ರದರ್ಶಿಸಿ ಬೇಷ್ ಎನಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net