ಶ್ರೀರಾಮ ದೇವರಿಗೆ ವಿಶೇಷ ಪೂಜೆ

22hgr 2
ದಳವಾಯಿ ಕೊಡಹಳ್ಳಿ ಗ್ರಾಮದಲ್ಲಿ ರಾಮದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುತ್ತಿರುವ ಭಕ್ತರು.
Published on

ಹಲಗೂರು: ಹಲಗೂರು, ಕೊನ್ನಾಪುರ ರಾಮಮಂದಿರ ದೇವಸ್ಥಾನ, ಬಾಣಸಮುದ್ರ, ನಡಕಲುಪುರ, ನಂಜೇಗೌಡನ ದೊಡ್ಡಿ, ಹಾಡ್ಲಿ ಸರ್ಕಲ್ ಮತ್ತು ಸಮೀಪದ ದಳವಾಯಿ ಕೋಡಿಹಳ್ಳಿ ಸೇರಿದಂತೆ ಇನ್ನು ಹಲವು ಗ್ರಾಮಗಳಲ್ಲಿ ರಾಮಭಕ್ತರು ಹಾಗೂ ಗ್ರಾಮಸ್ಥರ ವತಿಯಿಂದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆ ಅಂಗವಾಗಿ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪ್ರಸಾದ ವಿತರಣೆ ಮಾಡಲಾಯಿತು.

ದಳವಾಯಿ ಕೊಡಹಳ್ಳಿ ಗ್ರಾಮದ ಸಿದ್ದಲಿಂಗಸ್ವಾಮಿ ಮಾತನಾಡಿ, ಶ್ರೀರಾಮ ಮಂದಿರ ಸ್ಥಾಪನೆ ಆಗಬೇಕು ಎನ್ನುವುದು ನಮ್ಮ 500 ವರ್ಷಗಳ ಕನಸು. ಅದು ಇಂದು ನನಸು ಆಗುತ್ತಿದೆ. ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ ಎಂದರು. ಶ್ರೀ ರಾಮನ ಭಕ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net