

ಹರಪನಹಳ್ಳಿ: ತಾಲೂಕಿನ ಅರಸೀಕೆರೆಯ ಕೊಟ್ಟೂರೇಶ್ವರ ಮರಡಿಗೆ ನಾಗರ ಪಂಚಮಿ ನಿಮಿತ್ತ ಜನರು ತೆರಳಿ ಮಂಗಳವಾರ ದರ್ಶನ ಪಡೆದರು.
ಗ್ರಾಮದಲ್ಲಿ ಮೊದಲನೇ ದಿನ ಶನಿವಾರ ರೊಟ್ಟಿ ಹಬ್ಬ ಆಚರಿಸಿದರು. ಎರಡನೇ ದಿನ ಭಾನುವಾರ ಚೌತಿ ನಾಗಮೂರ್ತಿಗೆ ಹಾಲೆರೆದು ಸಂಭ್ರಮಿಸಿದರು. ಮೂರನೇ ದಿನ ಮಂಗಳವಾರ ಊರಿನ ಜನರೆಲ್ಲಾ ಎತ್ತಿನ ಬಂಡಿ, ಟ್ರಾಕ್ಟರ್ ಮೂಲಕ ಕೊಟ್ಟೂರೇಶ್ವರ ಸನ್ನಿಧಿಗೆ ತೆರಳಿ ಈಶ್ವರ, ಬಸವಣ್ಣ ದೇವರ ದರ್ಶನ ಮಾಡಿದರು.
ಇದನ್ನೂ ಓದಿ: ಶ್ರದ್ಧಾ ಭಕ್ತಿಯಿಂದ ನಾಗರ ಪಂಚಮಿ ಆಚರಣೆ
ಕೊಟ್ಟೂರೇಶ್ವರ ಸ್ವಾಮಿಯು ಕೊಟ್ಟೂರಿಗೆ ಹೋಗುವಾಗ ಈ ಮರಡಿಯಲ್ಲಿ ತಂಗಿರುತ್ತಾನೆ ಎಂಬ ನಂಬಿಕೆ ಇದೆ. ಆದ್ದರಿಂದ ಈ ಸ್ಥಳಕ್ಕೆ ಕೊಟ್ಟೂರು ಮರಡಿ ಎಂದು ಹೆಸರು ಬಂದಿದೆ. ಪ್ರತಿವರ್ಷ ಪಂಚಮಿ ಹಬ್ಬದಲ್ಲಿ ಅರಸೀಕೆರೆಯ ಜನರೆಲ್ಲಾ ಈ ಸ್ಥಳಕ್ಕೆ ಬಂದು ದೇವರ ದರ್ಶನ ಪಡೆಯುತ್ತಾರೆ.
ಭಕ್ತರಾದ ಜಿ. ವಿ. ವೆಂಕಟೇಶ್ ಶೆಟ್ರು, ರಮೇಶ್ ಶೆಟ್ರು, ನಾಗರಾಜ್ ಶೆಟ್ರು, ಸವಿತ, ರೂಪ, ಸುಮ, ಮಂಜುಳ, ಸುನಂದ, ಅದಿತಿ, ಶ್ರಾವಣಿ, ಅನು, ಸ್ವಾತಿ, ಮನು, ನಿಹಾಲ್, ಮಹೇಶ್, ಅಜ್ಜಯ್ಯ ಇದ್ದರು.