ಲಕ್ಷ್ಮೀದೇವಿಗೆ ವಿಶೇಷ ಪೂಜೆ

02M.D.R.6
Published on

ಮದ್ದೂರು: ನವರಾತ್ರಿ ಹಾಗೂ ವಿಜಯದಶಮಿ ಪ್ರಯುಕ್ತ ತಾಲೂಕಿನ ಬೆಸಗರಹಳ್ಳಿಯ ಲಕ್ಷ್ಮೀದೇವಿ ದೇಗುಲದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಮುಂಜಾನೆಯೇ ಲಕ್ಷ್ಮೀದೇವಿಗೆ ವಿಶೇಷ ಅಲಂಕಾರ ಮಾಡಿ, ಹೋಮ, ಹವನ, ಮಹಾಮಂಗಳಾರತಿ ಸಡಗರ ಸಂಭ್ರಮದಿಂದ ನಡೆದವು. ವಿಶೇಷ ಪೂಜೆಯಲ್ಲಿ ಹಲವು ಭಕ್ತರು ಭಾಗಿಯಾಗಿದ್ದರು. ಭಕ್ತರಿಗೆ ತೀರ್ಥ, ಪ್ರಸಾದ ವಿತರಣೆ ಮಾಡಲಾಯಿತು. ಪೂಜೆ ಕಾರ್ಯಕ್ರಮದ ನೇತೃತ್ವವನ್ನು ಅರ್ಚಕರಾದ ರವಿನಾರಾಯಣ್, ಗೋಪಾಲಣ್ಣ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net