

ಬ್ರಹ್ಮಾವರ: ಬಾರಕೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಬ್ರಹ್ಮಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಬಾರಕೂರು ಕಾಲಬೈರವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನೆರವೇರಿದವು. ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದಲ್ಲಿ ಭಜನೆ ನಡೆಯಿತು. ಕಚ್ಚೂರು ದೇವಸ್ಥಾನದ ಆಡಳಿ ಮಂಡಳಿಯ ಲಕ್ಷ್ಮಣ ಕರಾವಳಿ, ಡಾ.ಸುಮತಿಕ ರಾವಳಿ ದಂಪತಿಯಿಂದ ಬೃಹತ್ ಕಾಲು ದೀಪ ಕೊಡುಗೆಯಾಗಿ ಕ್ಷೇತ್ರಕ್ಕೆ ಸಮರ್ಪಿಸಲಾಯಿತು.