

ಕಾರವಾರ: ಗ್ರಾಮ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಮತದಾದರರಿಗೆ ಮದ್ಯದ ಆಮಿಷ ಒಡ್ಡುವ ಹಾಗೂ ಗೊವಾ ರಾಜ್ಯದಿಂದ ಅಗ್ಗದ ಮದ್ಯವನ್ನು ಸಾಗಣೆ ಮಾಡುವ ಸಾಧ್ಯತೆಗಳಿದ್ದು, ಅಬಕಾರಿ ಅಧಿಕಾರಿಗಳು ಮದ್ಯ ವಿತರಕರು ಹಾಗೂ ಸನ್ನದುದಾರರ ಚಟುವಟಿಕೆಗಳ ಮೇಲೆ ವಿಶೇಷ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಹರೀಶ್ಕುಮಾರ ಕೆ. ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಅಬಕಾರಿ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ನಿಯಮ ಉಲ್ಲಂಘಿಸುವ ಸನ್ನದ್ಧುದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಕಾನೂನು ಪಾಲನೆಯಲ್ಲಿ ಯಾವುದೇ ಲೋಪವಾದಲ್ಲಿ ಸಂಬಂಧಿಸಿದ ಅಧಿಕಾರಿಯನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಸಂದಂರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್.ಕೆ., ಅಬಕಾರಿ ಉಪ ಆಯುಕ್ತ ಶಿವನಗೌಡ, ಅಬಕಾರಿ ಉಪ ಅಧೀಕ್ಷಕ ಸಂತೋಷ ಉಪಸ್ಥಿತರಿದ್ದರು.
ಕಂಟ್ರೋಲ್ ರೂಂ ಪ್ರಾರಂಭ
ಗ್ರಾಪಂ ಚುನಾವಣೆಯಲ್ಲಿ ಅಕ್ರಮ ಮದ್ಯ ತಡೆಗೆ ಅಬಕಾರಿ ಇಲಾಖೆಯಿಂದ ವಿಶೇಷ ಜಾಗೃತ ದಳ ಹಾಗೂ ಕಂಟ್ರೋಲ್ ರೂಂ ಪ್ರಾರಂಭಿಸಿದೆ. ಅಕ್ರಮ ಮದ್ಯದ ಬಗ್ಗೆ ಮಾಹಿತಿ ಇದ್ದಲ್ಲಿ ಸಾರ್ವಜನಿಕರು ಮಾಹಿತಿ ನೀಡುವಂತೆ ಅಬಕಾರಿ ಅಧಿಕಾರಿಗಳು ವಿನಂತಿಸಿದ್ದಾರೆ.
ಜಿಲ್ಲಾ ಕಂಟ್ರೋಲ್ ರೂಂ ಟೋಲ್ ಫ್ರೀ ಸಂಖ್ಯೆ: 18005997094, ಕೇಂದ್ರ ಕಚೇರಿ ಟೋಲ್ ಫ್ರೀ ಸಂಖ್ಯೆ: 18004252550 ಗಳಿಗೆ ಕರೆ ಮಾಡಬಹುದಾಗಿದೆ. ಅಲ್ಲದೆ, ಕಾರವಾರ: 08382-228751,ಅಂಕೋಲಾ: 08388-230440,ಕುಮಟಾ:08386-220367, ಹೊನ್ನಾವರ:08387-222806, ಭಟ್ಕಳ:08385-222235,ಶಿರಸಿ:08384-224168,ಯಲ್ಲಾಪುರ:08419-295115, ದಾಂಡೇಲಿ:08284-232805 ಕರೆ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.
EndFragment