ಶ್ರೀಸತ್ಯಸಾಯಿ, ಶಿರಡಿ ಸಾಯಿಬಾಬಗೆ ವಿಶೇಷ ಪೂಜೆ

SRP_21-02jpj
Published on

ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಶ್ರೀಸತ್ಯಸಾಯಿ ಬಾಬ ಸೇವಾ ಆಶ್ರಮದಲ್ಲಿ ಭಾನುವಾರ ಗುರುಪೌರ್ಣಿಮೆ ಪ್ರಯುಕ್ತ ಶ್ರೀಸತ್ಯಸಾಯಿ ಹಾಗೂ ಶಿರಡಿ ಸಾಯಿಬಾಬಗೆ ವಿಶೇಷ ಪೂಜಾ ಕೈಕಂರ್ಯಗಳನ್ನು ನೆರವೇರಿಸಲಾಯಿತು.


ಪಟ್ಟಣದ ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಆಶ್ರಮವನ್ನು ವಿವಿಧ ಬಗೆಯ ವಿಶೇಷ ಹೂವುಗಳು ಹಾಗೂ ವಿದ್ಯುತ್ ದೀಪಗಳಿಂದ ಅಲಂಕಾರಗೊಳಿಸಿದ್ದು, ಮಂದಿರದಲ್ಲಿ ನೆರೆದಿದ್ದ ಸಾವಿರಾರು ಸಾಯಿ ಭಕ್ತರು ಶ್ರೀಸತ್ಯನಾರಾಯಣಸ್ವಾಮಿ ಪೂಜೆಯೊಂದಿಗೆ ಶ್ರೀಸತ್ಯಸಾಯಿ, ಶಿರಡಿ ಸಾಯಿ ಭಕ್ತಿ ಗೀತೆಗಳನ್ನು ಹಾಡಿದರು. ಬಳಿಕ ಶ್ರೀಸತ್ಯಸಾಯಿ ಬಾಬ ಅವರ ಭಾವಚಿತ್ರ ಸೇರಿದಂತೆ ಅಮೃತಶಿಲೆಯ ಮೂರ್ತಿಗೆ ಜ್ಯೋತಿ ಬೆಳಗಿದರು.


ಬಳಿಕ ಆಶ್ರಮ ಹೊರಭಾಗದಲ್ಲಿ ಸಾವಿರಾರು ಜನರಿಗೆ ಈ ವೇಳೆ ಅನ್ನಸಂತರ್ಪಣೆ ನೆರವೇರಿಸಲಾಯಿತು.ಗುರುಪೂರ್ಣಿಮೆ ಹಿನ್ನೆಲೆ ಪಟ್ಟಣದ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಬೃಂದಾವನದಲ್ಲಿರುವ ಶ್ರೀಗುರುಸೌರ್ವಭೌಮರಿಗೆ ವಿಶೇಷ ಪೂಜೆ, ಅಭಿಷೇಕ ಹಾಗೂ ಮಹಾಮಂಗಳರಾತಿ ನೆರವೇರಿಸಿ ಮೃತ್ತಿಕೆ ಸಂಗ್ರಹಿಸಲಾಯಿತು. ದೇಗುಲಕ್ಕೆ ಆಗಮಿಸಿದ್ದ ನೂರಾರು ಭಕ್ತರಿಗೆ ದರ್ಶನ ಪ್ರಾಪ್ತಿಯೊಂದಿಗೆ ಪ್ರಸಾದ ವಿತರಣೆ ಮಾಡಲಾಯಿತು. ಗಂಜಾಂನ ಶ್ರೀಶಿರಡಿ ಸಾಯಿ ಬಾಬಾ ಹಾಗೂ ದೊಡ್ಡೇಗೌಡನ ಕೊಪ್ಪಲು ಸಮೀಪದ ಶ್ರೀಓಂಕಾರೇಶ್ವರ ದೇವಾಲಯದ ಸಾಯಿ ಮಂದಿರದಲ್ಲೂ ವಿಶೇಷ ಪೂಜೆ ನೆರವೇರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net