

ಕೆ.ಆರ್.ಪೇಟೆ: ಪಟ್ಟಣದ ಹೊರವಲಯದ ಹೇಮಗಿರಿ ರಸ್ತೆಯಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಾಲಯದಲ್ಲಿ ಆಷಾಢ ಶುಕ್ರವಾರದ ಅಂಗವಾಗಿ ವಿಶೇಷ ಪೂಜೆ, ಅಭಿಷೇಕ ನೆರವೇರಿತು.
ತಾಯಿ ಚೌಡೇಶ್ವರಿ ಅಮ್ಮನಿಗೆ ಬೆಣ್ಣೆ ಅಲಂಕಾರ ಮಾಡಲಾಗಿತ್ತು. ಸಾವಿರಾರು ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ನಿಂಬೆ ಹಣ್ಣಿನ ಆರತಿ ಬೆಳಗಿ ಸಂಭ್ರಮಿಸಿದರು. ವೇದಬ್ರಹ್ಮ ಸಾಂಸ್ಕೃತಿಕ ಸಂಘಟಕ ಶ್ರೀ ರವಿಶಾಸ್ತ್ರಿ ಅವರು ಪೂಜಾ ವಿಧಿ ವಿಧಾನಗಳ ನೇತೃತ್ವ ವಹಿಸಿದ್ದರು. ಮುಂಜಾನೆಯಿಂದಲೇ ವಿಶೇಷ ಪೂಜೆ, ಹೋಮ, ಹವನಗಳು ನಡೆದವು. ಸಾವಿರಾರು ಭಕ್ತರು ಭಾಗವಹಿಸಿ ಭಕ್ತಿ ನಮನ ಸಲ್ಲಿಸಿ, ಮೊಸರನ್ನ ಪುಳಿಯೋಗರೆ ಪ್ರಸಾದ ಸ್ವೀಕರಿಸಿದರು.